ಯುವಕರಿಗೆ ಬುದ್ದಿವಾದ ಹೇಳಬೇಕು

0
14

ವಿಜಯಪುರ : ಕೆಲವು ಯುವಕರು ರಾಮ ಮಂದಿರ ಕೆಡುವುದಾಗಿ ಹೇಳಿಕೆ ನೀಡಿದ್ದಾರೆ, ತಪ್ಪು ದಾರಿ ತುಳಿಯುತ್ತಿರುವ ಈ ರೀತಿಯ ಯುವಕರಿಗೆ ಬುದ್ದಿವಾದ ಹೇಳಬೇಕು ಎಂದು ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬದಲಾದ ನಂತರ ರಾಮ ಮಂದಿರ ಕೆಡವುತ್ತೇವೆ ಎಂದು ಕೆಲವು ಯುವಕರು ಹೇಳಿಕೆ ಹರಿಬಿಟ್ಟಿದ್ದಾರೆ. ಆ ಸಮಾಜದ ಹಿರಿಯರು ಬುದ್ಧಿವಾದ ಹೇಳಬೇಕು. ನಮ್ಮದು ಹಿಂದೂ ದೇಶ ಎಂದು ಹೇಳಿಕೊಳ್ಳಲು ಸಂಕೋಚವೇಕೆ? ವಿವಾದಿತ ಸ್ಥಳದಲ್ಲಿ ಶ್ರೀರಾಮನ ಪೂಜೆಗೆ ಅವಕಾಶ ಕೊಟ್ಟಿದ್ದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂಬ ಕಾಂಗ್ರೆಸ್ಸಿಗರ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಅದರಿಂದ ಏನು ಇವಾಗ ಎಂದ ಶ್ರೀಗಳು ರಾಮರಾಜ್ಯ ಮಾಡದೆ ಇರೋ ಅಪವಾದ ಹಂಚಿಕೊಳ್ಳಲು ತಯಾರಿದ್ದಾರಾ? ಎಂದು ಪ್ರಶ್ನಿಸಿದರು.

Previous articleಮೈಷುಗರ್ 121 ಕೋಟಿ ನುಂಗಿದ ನಾಗರಾಜಪ್ಪ
Next articleʼಬಾಬಾಬುಡನ್ ಗಿರಿಯಲ್ಲಿ ಗೋರಿ ದ್ವಂಸ ಪ್ರಕರಣ ಮರುತನಿಖೆʼ ಸುದ್ದಿ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ