ರಾಮ ಮಂದಿರದ ಬಳಿ ವಾಲ್ಮೀಕಿ ಮಂದಿರ ನಿರ್ಮಿಸಿ

0
9

ಹಾವೇರಿ: ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ವಾಲ್ಮೀಕಿ ಹೆಸರಿಟ್ಟಿರುವುದು ಸಂತಸ ತಂದಿದೆ. ಮುಂದೆ ರಾಮ ಮಂದಿರದ ಬಳಿ ವಾಲ್ಮೀಕಿ ಮಂದಿರವನ್ನೂ ನಿರ್ಮಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ರಾಣೇಬೆನ್ನೂರಿನಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿರುವುದು ನಮಗೆಲ್ಲಾ ಸಂತಸ ತಂದಿದೆ. ಇದು ಭಾರತೀಯರ ಕನಸಾಗಿತ್ತು. ಜನರ ನಿರೀಕ್ಷೆಯಂತೆ ಒಳ್ಳೆಯ ರೀತಿಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ದೇಶದ ಹಲವು ಪ್ರತಿಷ್ಠಿತ ಮಂದಿರಗಳಲ್ಲಿ ಇದು ಕೂಡಾ ಒಂದಾಗಿದೆ ಎಂದರು.

Previous articleಅಯೋಧ್ಯೆಗೆ ಹೋಗಲು ಆಹ್ವಾನ ಬೇಕಿಲ್ಲ
Next articleಬಟ್ಟೆ ಮಳಿಗೆಯಲ್ಲಿ ಮಿಸ್ ಫೈರಿಂಗ್