ಕಾಟೇರ ದರ್ಶನಕ್ಕೆ ಸಖತ್ ಡಿಮ್ಯಾಂಡ್

0
111

ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಸಾವಿರಾರು ಟಿಕೆಟ್‌ಗಳು ಭರ್ಜರಿ ಬಿಕರಿ..!

ದರ್ಶನ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಕಾಟೇರ ಡಿಸೆಂಬರ್ ೨೯ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಹಾಡುಗಳು ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿರುವ ಚಿತ್ರತಂಡ, ಇದೀಗ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೂ ಕಮಾಲ್ ಮಾಡುತ್ತಿದೆ. ಎರಡು ದಿನಗಳ ಹಿಂದಷ್ಟೇ `ಬುಕ್ ಮೈ ಶೋ’ ಮೂಲಕ ಅಡ್ವಾನ್ಸ್ ಬುಕ್ಕಿಂಗ್ ತೆರೆಯಲಾಗಿತ್ತು. ಕಡಿಮೆ ಅವಧಿಯಲ್ಲೇ ಮೂವತ್ತು ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಬಿಕರಿಯಾಗಿವೆ. ಇದಲ್ಲದೇ ಕೆಲವೊಂದು ಚಿತ್ರಮಂದಿರಗಳಲ್ಲಿ ನೇರವಾಗಿ ಟಿಕೆಟ್ ಕೌಂಟರ್ ತೆರೆಯಲಾಗಿದ್ದು, ಅಲ್ಲಿಯೂ ಸಾವಿರಾರು ಟಿಕೆಟ್‌ಗಳು ಸೇಲ್ ಆಗುವ ಮೂಲಕ ಮೊದಲ ದಿನದ ಬಹುತೇಕ ಪ್ರದರ್ಶನಗಳು ಈಗಾಗಲೇ ಹೌಸ್‌ಫುಲ್ ಆಗಿವೆ. ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ನಿರ್ಮಾಣವಿದೆ.

೧೨ ಗಂಟೆಯಿಂದಲೇ ಪ್ರದರ್ಶನ
ಸ್ಟಾರ್ ಸಿನಿಮಾಗಳೆಂದರೆ ಪ್ರೀಮಿಯರ್ ಶೋಗಾಗಿ ಅಭಿಮಾನಿಗಳಿಂದ ಸಾಕಷ್ಟು ಬೇಡಿಕೆ ಇರುತ್ತದೆ. ಹೀಗಾಗಿ `ಕಾಟೇರ’ ಚಿತ್ರತಂಡ ಪ್ರೀಮಿಯರ್ ಶೋ ಬದಲಿಗೆ ಗುರುವಾರ ಮಧ್ಯರಾತ್ರಿಯಿಂದಲೇ ಪ್ರದರ್ಶನ ಶುರು ಮಾಡಲಿದೆ. ಬೆಂಗಳೂರಿನ ರಾಕ್‌ಲೈನ್ ಮಾಲ್‌ನಲ್ಲಿ ೧೨.೦೫ಕ್ಕೆ ಅಭಿಮಾನಿಗಳಿಗೆಂದೇ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಹಾಗೆಯೇ ಅನುಪಮ, ಪ್ರಸನ್ನ ಸೇರಿದಂತೆ ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ಹಲವೆಡೆ ಮಧ್ಯರಾತ್ರಿ ಹಾಗೂ ಬೆಳ್ಳಂ ಬೆಳಗ್ಗೆಯೇ ಪ್ರದರ್ಶನ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಕಾಟೇರಮ್ಮ ದೇವಿ ಪ್ರತಿಷ್ಠಾಪನೆ
ದರ್ಶನ್ ಅಭಿಮಾನಿ ಬಳಗ, ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಡಿ.೨೮ ರಂದು ಕಾಟೇರಮ್ಮ ದೇವಿಯ ಪ್ರತಿಷ್ಠಾಪನೆ, ಪಲ್ಲಕ್ಕಿಯಲ್ಲಿ ಮೆರವಣಿಗೆ, ಅನ್ನದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

Previous articleನಂಬಿಕೆಗಿಂತ ಮಿಗಿಲಾದುದಿಲ್ಲ
Next articleಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ