ಅಗ್ನಿ ಅವಘಡ: ಅಪಾರ ಪ್ರಮಾಣದ ಹತ್ತಿ ಬೆಂಕಿಗಾಹುತಿ

0
17
FIRE

ಯಾದಗಿರಿ: ನಗರದ ಹೊರಭಾಗದ ಆರ್.ಆರ್.ಕಾಟನ್ ಮೀಲ್ ನಲ್ಲಿ ಆಕಸ್ಮಿಕ ವಾಗಿ ಬೆಂಕಿ ತಗುಲಿ ಕೋಟ್ಯಾಂತರ ರೂ. ಮೌಲ್ಯದ ಹತ್ತಿ ಸುಟ್ಟು ಕರಕಲಾದ ಘಟನೆ ನಡೆದಿದೆ.

ಎಂ.ಡಿ.ಉಸ್ಮಾನ್ ಅವರಿಗೆ ಸೇರಿದ್ದ ಕಾಟನ್ ಮೀಲ್ ಇದಾಗಿದೆ.

3 ಸಾವಿರ ಕ್ವಿಂಟಾಲ್ ಹತ್ತಿ ರೈತರಿಂದ ಸಂಗ್ರಹಿಸಿ ಇಡಲಾಗಿತ್ತು,. 1 ಕೋಟಿ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಕರಕಲಾಗಿದೆ ಎಂದು ಅಂದಾಜು ಮಾಡಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತು. ಯಾದಗಿರಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಗೋಹತ್ಯೆ ನಿಷೇಧ ನಾಮಕಾವಸ್ಥೆ: ತೂಬಿನಕೆರೆಯಲ್ಲಿ ಗೋವಿನ ಮೂಳೆಗಳ ರಾಶಿ
Next articleಆಕಸ್ಮಿಕ ಬೆಂಕಿ: ಬಣವೆ ಭಸ್ಮ