ಸೆಂಟ್ರಲ್ ಕ್ಷೇತ್ರದಲ್ಲಿ ಆದಂತೆ ಏನ ಬೇಕಾದರೂ ಆಗಬಹುದು

0
25

ಹುಬ್ಬಳ್ಳಿ: ಜಾತಿ ಆಧಾರದ ಮೇಲೆ ಟಿಕೆಟ್ ಕೊಟ್ಟರು ಕೊಡಬಹುದು ಎಂದು ಬಿಜೆಪಿ ನಾಯಕ ಪ್ರದೀಪ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ನಾಯಕರ ವಿರುದ್ಧ ಯಾವುದೇ ಅಸಮಾಧಾನವಿಲ್ಲ, ಈ ಹಿಂದೆ ವೀರಶೈವ ಲಿಂಗಾಯತರಿಗೆ ಪಕ್ಷದಲ್ಲಿ ಅನುಕೂಲ ಮತ್ತು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದೆ, ಅದರಂತೆ ಹೈಕಮಾಂಡ್‌ ನಮ್ಮ ಸಮುದಾಯದ ಯುವ ಮುಖಂಡ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದು ಸಹಜವಾಗಿ ಸಂತೋಷ ತಂದಿದೆ. ನಮ್ಮಲ್ಲಿ ಅತಿ ಹೆಚ್ಚು ಲಿಂಗಾಯಿತರಿರುವ ಕ್ಷೇತ್ರಗಳಿವೆ, ನಮ್ಮ ಜಾತಿ ಬಲಾಡ್ಯವಾಗಿದೆ, ಮುಂದೆಯೂ ನಮ್ಮ ಸಮುದಾಯಕ್ಕೆ ಪಕ್ಷದಲ್ಲಿ ಹೆಚ್ಚು ಅವಕಾಶ ಸಿಗಬೇಕು. 40 ವರ್ಷದಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಸಮುದಾಯ ಪ್ರಬಲವಾಗಿದೆ. ಇನ್ನೂ ಸಮಯ ಇದೆ ಕಾದು ನೋಡೋಣ, ಸೆಂಟ್ರಲ್ ಕ್ಷೇತ್ರದಲ್ಲಿ ಆದಂತೆ ಎಲ್ಲಿ ಬೇಕಾದರೂ, ಏನು ಬೇಕಾದರೂ ಆಗಬಹುದು, ನಾನೇನು ಸನ್ಯಾಸಿ ಅಲ್ಲ ನಮಗೂ ಆಸೆ ಇರುತ್ತೆ ಕೊಡದೆ ಇದ್ರೆ ಪಕ್ಷದ ವಿರುದ್ಧ ರೆಬಲ್ ಆಗೋದಿಲ್ಲ ಎಂದಿದ್ದಾರೆ.

Previous articleಲೋಕಸಭೆಯಲ್ಲಿ ದಾಳಿ: ಪ್ರತಾಪಸಿಂಹ ವಿಚಾರಣೆ ಮಾಡುವ ಅಗತ್ಯ ಇಲ್ಲ
Next articleಹೊಸ ವಂಟಮೂರಿ ಪ್ರಕರಣ: ತನಿಖೆ ಸಿಐಡಿಗೆ ಹಸ್ತಾಂತರ