ಬೆಳಗಾವಿ ಜಿಲ್ಲೆ ವಿಭಜಿಸು; ದೇವಿಗೆ ಭಕ್ತನ ಹರಕೆ

0
107
ಸವದತ್ತಿ ಯಲ್ಲಮ್ಮ

ಬೆಳಗಾವಿ: ಜಿಲ್ಲೆ ವಿಭಜಿಸುವಂತೆ ಭಕ್ತರೊಬ್ಬರು ವಿಚಿತ್ರ ಹರಕೆ ಪತ್ರ ಬರೆದು ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹಾಕಿದ್ದಾರೆ.
ಜಿಲ್ಲೆಯನ್ನು ೪ ಜಿಲ್ಲೆಗಳಾಗಿ ವಿಭಜಿಸು, ಮುಖ್ಯಮಂತ್ರಿಗೆ ಒಳ್ಳೆಯ ಬುದ್ಧಿ ನೀಡು ಎಂದು ಹರಕೆ ಪತ್ರದಲ್ಲಿ ಬರೆಯಲಾಗಿದೆ.
ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ೧೦ ತಾಲೂಕು ಇದ್ದವು. ಈಗ ೧೪ ತಾಲೂಕು ಆಗಿವೆ. ಹೀಗಾಗಿ ಬೆಳಗಾವಿ ವಿಭಜಿಸಿ ಬೆಳಗಾವಿ, ಗೋಕಾಕ್, ಚಿಕ್ಕೋಡಿ, ಬೈಲಹೊಂಗಲ ನಗರಗಳನ್ನು ಜಿಲ್ಲೆಗಳಾಗಿ ಮಾಡಿ. ಕೊಡಗಿನಲ್ಲಿ ಕೇವಲ ೨ ವಿಧಾನ ಸಭಾ ಕ್ಷೇತ್ರವಿದ್ದರೂ ಜಿಲ್ಲೆ ಮಾಡಿದ್ದಾರೆ. ಹಾಗೇ ನಮ್ಮ ಜಿಲ್ಲೆಯಲ್ಲಿ ೧೪ ತಾಲೂಕು, ೧೮ ವಿಧಾನಸಭಾ ಕ್ಷೇತ್ರ ಇದ್ದು ನಾಲ್ಕು ಜಿಲ್ಲೆಗಳನ್ನಾಗಿ ಮಾಡಬೇಕು ಎಂದು ೪ ಪುಟಗಳ ಸುದೀರ್ಘ ಪತ್ರ ಬರೆದು ಸವದತ್ತಿ ಯಲ್ಲಮ್ಮ ದೇವಿಗೆ ಹರಕೆ ಕಟ್ಟಿಕೊಂಡಿರುವ ಬಗ್ಗೆ ತಿಳಿದುಬಂದಿದೆ. ಸದ್ಯ ಈ ವಿಷಯ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Previous articleಬುಡಕಟ್ಟು ಆದಿವಾಸಿಗಳ ಭಾಷೆಗಳಿಗೆ ಧ್ವನಿಭಾಷಾನುವಾದ ರೋಬೋಟ್ ಸಂಶೋಧನೆ
Next articleಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗೆ ನೈತಿಕ ಹಕ್ಕಿಲ್ಲ: ಸಿಎಂ ಬೊಮ್ಮಾಯಿ