Home Advertisement
Home ಅಪರಾಧ ವಂಟಮುರಿ ಮಹಿಳೆ ದೌರ್ಜನ್ಯ ಪ್ರಕರಣ: ಮಾನವ ಹಕ್ಕುಗಳ ಆಯೋಗದಿಂದ ಸ್ವಯಂ ಪ್ರಕರಣ ದಾಖಲು

ವಂಟಮುರಿ ಮಹಿಳೆ ದೌರ್ಜನ್ಯ ಪ್ರಕರಣ: ಮಾನವ ಹಕ್ಕುಗಳ ಆಯೋಗದಿಂದ ಸ್ವಯಂ ಪ್ರಕರಣ ದಾಖಲು

0
50

ಧಾರವಾಡ: ಬೆಳಗಾವಿ ಜಿಲ್ಲೆಯ ವಂಟಮುರಿಯಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯ ಘಟನೆ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ. ಎಸ್.ಕೆ. ವಂಟಿಗೋಡಿ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮಾಧ್ಯಮಗಳ ವರದಿ ಆಧರಿಸಿ ದೂರು ದಾಖಲಿಸಿಕೊಳ್ಳಲಾಗಿದೆ. ನಮ್ಮ ಆಯೋಗದ ಅಧ್ಯಕ್ಷರು ಕ್ರಮ ಜರುಗಿಸುತ್ತಾರೆ. ಕ್ರಮ ಜರುಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆಯಾದರೂ ಆಯೋಗ ದೂರು ದಾಖಲಿಸಿಕೊಳ್ಳುತ್ತದೆ. ಸಂಬಂಧಿಸಿದವರಿಂದ ವಿವರಣೆ ಸಹ ಕೇಳುತ್ತೇವೆ. ವಿವರ ಸರಿ ಇಲ್ಲದಾಗ ಸಂಬಂಧಿಸಿದ ಅಧಿಕಾರಿ ಮೇಲೆ ಕ್ರಮಕ್ಕೆ ಸರ್ಕಾರಕ್ಕೆ ತಿಳಿಸಲಾಗುತ್ತದೆ ಎಂದರು.

Previous articleಕಾಡಿನಲ್ಲಿ ಮಂಗಗಳ ಶವ ಪತ್ತೆ
Next articleಮೈಶಾಳ ಬ್ಯಾರೇಜ್ ಪೂರ್ಣಗೊಂಡರೆ ೭೦೦ ಹಳ್ಳಿಗಳಿಗೆ ಬರ