ಹವಾಮಾನದಲ್ಲಿ ಹಠಾತ್ ಬದಲಾವಣೆ: ಕೋಟೆ ನಗರ ಸುತ್ತಮುತ್ತ ಧಾರಾಕಾರ ಮಳೆ

0
28

ಬೀದರ್ : ಕೋಟೆ ನಗರ ಬೀದರ್ ಸುತ್ತಮುತ್ತ ಶುಕ್ರವಾರ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನ ೩-೨೦ ಗಂಟೆಗೆ ಆರಂಭವಾದ ಮಳೆಯ ಪ್ರಕೋಪ ಸುಮಾರು ಹೊತ್ತು ಮುಂದುವರೆಯಿತು. ಪ್ರಮುಖ ರಸ್ತೆಗಳು ಜಲಾವೃತಗೊಂಡವು. ಜವ ಜೀವನ ಅಯೋಮಯವಾಯಿತು.
ನೆನ್ನೆ ಗುರುವಾರ ಮುಸ್ಸಂಜೆ ಜಿಲ್ಲೆಯಲ್ಲಿನ ಹವಾಮಾನದಲ್ಲಿ ಹಠಾತ್ ಬದಲಾವಣೆಯಾಯಿತು. ಚಳಿ ಹೆಚ್ಚಿತು. ಕಳೆದ ರಾತ್ರಿ ಆಗಸದಲ್ಲಿ ಕಪ್ಪು ಮೋಡಗಳು ಕವಿದವು. ಶುಕ್ರವಾರ ಮಬ್ಬುಗತ್ತಲೆ ಮತ್ತು ಥಂಡಿ ವಾತಾವರಣದ ಮಧ್ಯೆ ಶುಕ್ರವಾರ ದಿನ ಆರಂಭವಾಯಿತು. ಸೂರ್ಯ ಕಂಡು ಬಂದದ್ದು ಬೆಳಿಗ್ಗೆ ೮ ಗಂಟೆಗೆ. ಮಧ್ಯಾಹ್ನ ನೋಡು ನೋಡುತ್ತಿದ್ದಂತೆಯೇ ಮಳೆರಾಯನ ಆಗಮನವಾಯಿತು. ಸುಮಾರು ದಿನಗಳ ಬಳಿಕ ಸುರಿದ ಪ್ರಥಮ ಮಳೆ ಇದಾಗಿದೆ. ಮಬ್ಬುಗತ್ತಲೆಯ ವಾತಾವರಣ ಗೋಧೂಳಿಯವರೆಗು ಕೂಡ ಮುಂದುವರೆಯಿತು. ಲಭ್ಯ ಮಾಹಿತಿ ಪ್ರಕಾರ ಮುಂದಿನ ಎರಡು ದಿನಗಳವರೆಗೆ ಬೀದರ್ ಜಿಲ್ಲೆಯಲ್ಲಿ ಥಂಡಿ, ಆಗಾಗ್ಗೆ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.

Previous articleಬೆಂಗಳೂರಲ್ಲಿ ಕಮಾಂಡ್ ಸೆಂಟರ್
Next articleಬೆಳಗಾವಿ ದಂಡು ಮಂಡಳಿ ಸಿಇಒ ಅನುಮಾನಾಸ್ಪದ ಸಾವು