Home ತಾಜಾ ಸುದ್ದಿ 21 ಸಾವಿರ ನೌಕರರ ಪಿಎಫ್, ಇಪಿಎಫ್ ವಿವರ ವೆಬ್ ಸೈಟ್‌ನಲ್ಲಿ

21 ಸಾವಿರ ನೌಕರರ ಪಿಎಫ್, ಇಪಿಎಫ್ ವಿವರ ವೆಬ್ ಸೈಟ್‌ನಲ್ಲಿ

0
110

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 21ಸಾವಿರ ನೌಕರರ 2022-23ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಚಿಕ ಭವಿಷ್ಯ ನಿಧಿ ವಿವರಗಳನ್ನು ಸಂಸ್ಥೆಯ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 4,188 ಚಾಲಕರು, 2,701 ನಿರ್ವಾಹಕರು, 8,259 ಚಾಲಕ ಕಂ ನಿರ್ವಾಹಕರು,2,863 ತಾಂತ್ರಿಕ ಸಿಬ್ಬಂದಿ, 2,907 ಆಡಳಿತ ಸಿಬ್ಬಂದಿ ಹಾಗೂ 143 ಅಧಿಕಾರಿಗಳು ಸೇರಿದಂತೆ ಒಟ್ಟು 21,061 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ಸಿಬ್ಬಂದಿಗಳಿಗೆ ತಮ್ಮ ಪಿ.ಎಫ್. ಹಾಗೂ ವಿ.ಪಿ.ಎಫ್.ಖಾತೆಯಲ್ಲಿರುವ ಮೊತ್ತದ ವಿವರಗಳನ್ನು ಸುಲಭವಾಗಿ ತಿಳಿದುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ 2022-23ನೇ ಸಾಲಿನ ಭವಿಷ್ಯ ನಿಧಿ(ಪಿ.ಎಫ್) ಹಾಗೂ ಐಚ್ಛಿಕ ಭವಿಷ್ಯ ನಿಧಿ(ವಿ.ಪಿ.ಎಫ್) ವಿವರಗಳನ್ನು ವಾಕರಸಾ ಸಂಸ್ಥೆಯ ಪಿ.ಎಫ್. ವೆಬ್ ಸೈಟ್ www.pfnwkrtc.in ನಲ್ಲಿ ಪ್ರಕಟಿಸಲಾಗಿದೆ.
ಸಿಬ್ಬಂದಿಗಳು ತಮ್ಮ ಪಿ.ಎಫ್. ಸಂಖ್ಯೆ ಹಾಗೂ ಹುಟ್ಟಿದ ದಿನಾಂಕ ದಾಖಲಿಸುವ ಮೂಲಕ ಲಾಗಿನ್ ಆಗಿ ತಮ್ಮ ಪಿ.ಎಫ್. ಹಾಗೂ ವಿ.ಪಿ.ಎಫ್. ಖಾತೆಯ ವಿವರಗಳನ್ನು ಪಡೆಯಬಹುದಾಗಿದೆ.ಇದರ ಜೊತೆಗೆ 2018-19 ನೇ ಸಾಲಿನಿಂದ ಇಲ್ಲಿಯವರೆಗಿನ ವಿವರಗಳನ್ನು ಸಹ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ವಾಕರಸಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.

https://samyuktakarnataka.in/%e0%b2%b8%e0%b3%88%e0%b2%ac%e0%b2%b0%e0%b3%8d-%e0%b2%b5%e0%b2%82%e0%b2%9a%e0%b2%a8%e0%b3%86-%e0%b2%b5%e0%b2%bf%e0%b2%b7%e0%b2%b5%e0%b2%b0%e0%b3%8d%e0%b2%a4%e0%b3%81%e0%b2%b2-%e0%b2%9c%e0%b2%bf/