ಬೆಳಗಾವಿ ಜಿಲ್ಲೆಯಾದ್ಯಂತ ಉತ್ತಮ‌ ಮಳೆ

0
11

ಬೆಳಗಾವಿ: ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಿನ್ನೆ ತಡರಾತ್ರಿಯಿಂದಲೂ ಧಾರಾಕಾರ ಮಳೆಯಾಗುತ್ತಿದೆ.

ಮುಂಗಾರು ಮಳೆ ಇಲ್ಲದ ಬರದಿಂದ ಬಳಲಿದ್ದ ರೈತರಿಗೆ ಈ ಬಾರಿ ಉತ್ತಮ ಹಿಂಗಾರು ಮಳೆಯ ಲಕ್ಷಣ ಕಾಣುತ್ತಿದ್ದು, ಕಂಗೆಟ್ಟಿದ್ದ ಅನ್ನದಾತರ ಮುಖದಲ್ಲಿ ಮುಗುಳ್ನಗು ಮೂಡಿದೆ.

ಗುಡುಗು ಮಿಂಚಿನ ಸಹಿತ ಉತ್ತಮ ಮಳೆಯಾಗುತ್ತಿದ್ದು, ಕಾರ್ಮೋಡ ಕವಿದಿರುವುದರಿಂದ ಇನ್ನೂ ಕತ್ತಲಿದ್ದು, ಬೆಳಗಾದಂತೆ ಕಾಣುವುದೇ ಇಲ್ಲ. ಈ ಬಾರಿ ಹಿಂಗಾರು‌ ಉತ್ತಮ ಮಳೆಯಾದರೆ ರೈತರಿಗೆ ಒಂದಿಷ್ಟು ನೆಮ್ಮದಿ ಸಿಗಬಹುದು. ಸರ್ಕಾರ ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಶೀಘ್ರ ಪರಿಹಾರ ಒದಗಿಸಿದರೆ ಹಿಂಗಾರು ಬೆಳೆಯನ್ನು ಬೆಳೆದು ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಾಧ್ಯವಾದೀತು.

Previous articleಕಾಡಾನೆಗಳ ತುಳಿತಕ್ಕೆ ಕಾರ್ಮಿಕ ಮಹಿಳೆ ಸಾವು
Next articleಪೊಲೀಸ್ ವೈಫಲ್ಯ ಪಾಟೀಲ್ ಪರಾರಿ