ಹುಬ್ಬಳ್ಳಿ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವನ ದೇಹ ಛಿಧ್ರ ಛಿದ್ರಗೊಂಡ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಸಿಮ್ಲಾನಗರ ಬ್ರಿಜ್ ಬೈಪಾಸ್ ಬಳಿ ಬೆಳಗಿನ ಜಾವ ಸಂಭವಿಸಿದೆ.
ಮಲ್ಲೇಶ್ವರಂ ನಗರದ ನಿವಾಸಿ ವಿಜಯ ಪವಾರ (೫೮) ಎಂಬ ವ್ಯಕ್ತಿಯೇ ದಾರುಣವಾಗಿ ಸಾವನ್ನಪ್ಪಿದ್ದಾನೆ. ಬೆಳಗಿನ ಜಾವ ಭೀಕರವಾಗಿ ಈ ಘಟನೆ ಸಂಭವಿಸಿದ್ದು, ತನಿಖೆ ಬಳಿಕವಷ್ಟೇ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.
ಘಟನಾ ಸ್ಥಳಕ್ಕೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.