ಕೌಟುಂಬಿಕ ಕಲಹ: ಮನನೊಂದು ಯುವಕ ಆತ್ಮಹತ್ಯೆ

0
15
ಆತ್ಮಹತ್ಯೆ

ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ.‌
ನಿಖಿಲ್ ಕುಂದಗೋಳ (28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.‌
ನಿಖಿಲ್ ಹಾಗೂ ಪ್ರೀತಿ ಎಂಬ ಯುವತಿಯನ್ನು‌ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ. ಆದರೆ ಕಳೆದ ಕೆಲ‌ ತಿಂಗಳಿಂದ ಪತಿ ಹಾಗೂ ಪತ್ನಿಯ ನಡುವೆ ವೈಷಮ್ಯ ಮೂಡಿತ್ತು. ಹೀಗಾಗಿ ನಿತ್ಯ ಜಗಳವಾಗುತ್ತಿತ್ತು. ಹೀಗಾಗಿ ಪತ್ನಿ ಪ್ರೀತಿ ನಿಖಿಲ್ ಕಿರುಕುಳ ನೀಡಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದರು. ಕೇಶ್ವಾಪುರ ಪೊಲೀಸರು ನಿಖಿಲ್‌ನನ್ನು ಕರೆಸಿ ವಿಚಾರಣೆ ನಡೆಸಿದ್ದರು.
ಪೊಲೀಸ್‌ ಠಾಣೆಗೆ ಕರೆಯಿಸಿ ನಿಖಿಲ್ ನನ್ನು ವಿಚಾರಣೆ ನಡೆಸಿದ್ದರು. ಇಲ್ಲಿಂದ ತೆರಳಿದ ನಿಖಿಲ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆದರೆ ಪೊಲೀಸರ ಒತ್ತಡದಿಂದ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಈ‌ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಿಂದ ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಿದೆ.

Previous articleಎಲ್ಲಾ ಚರ್ಚೆ ಹಾಗೂ ಗೊಂದಲಗಳಿಗೆ ತೆರೆ
Next articleಮೈಮೇಲೆ ಬಿಸಿ ಸಾಂಬಾರ್ ಬಿದ್ದು ಗಾಯಗೊಂಡಿದ್ದ ಬಾಲಕ ಸಾವು