೧.೨೪ ಕೋಟಿ ಕಳ್ಳತನ ಪ್ರಕರಣ: ಹತ್ತು ಜನ ಆರೋಪಿಗಳ ಬಂಧನ

0
18

ಧಾರವಾಡ: ಕಳೆದ ದಿ. ೨೪ರಂದು ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾಗಿರಿ ಪೊಲೀಸರು ೧೦ ಜನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಅಲ್ಲಿಯ ಸಿಬ್ಬಂದಿ ಮೂವರ ಸಹಕಾರದಿಂದಲೇ ಕಳ್ಳತನ ನಡೆದಿದ್ದು ಅವರು ಸೇರಿದಂತೆ ೧೦ ಜನರನ್ನು ಬಂಧಿಸಿ ೮೫,೮೯,೮೭೦ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ಸಂಘದಲ್ಲಿಯೇ ಕೆಲಸ ಮಾಡುತ್ತಿದ್ದ ಕುಶಾಲಕುಮಾರ, ಮಹಾಂತೇಶ ಹಾಗೂ ಬಸವರಾಜ ಎಂಬುವವರ ಸಹಕಾರದಿಂದ ಮಂಜುನಾಥ, ಕಿರಣ, ರಜಾಕ ಅಹ್ಮದ, ವೀರೇಶ, ಜಿಲಾನಿ, ಪರಶುರಾಮ, ರಂಗಪ್ಪ ಎಂಬುವವರು ರಾಯಾಪುರದಲ್ಲಿಯ ಧರ್ಮಸ್ಥಳ ಸಂಘದ ಮುಖ್ಯ ಕಚೇರಿಯಲ್ಲಿ ಕಳೆದ ದಿ. ೨೪ರಂದು ೧.೨೪ ಕೋಟಿ ಹಣವನ್ನು ದೋಚಿದ್ದರು. ಒಂದು ವಾರದಲ್ಲಿಯೇ ಪ್ರಕರಣ ಬೇಧಿಸುವಲ್ಲಿ ವಿದ್ಯಾಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Previous articleಮಠದ ನಾಮಫಲಕಕ್ಕೆ ಸಗಣಿ: ಪ್ರಕ್ಷಬ್ದ ವಾತಾವರಣ
Next articleವಿಮಾನದಲ್ಲಿ ಕನ್ನಡದ ಹಬ್ಬ !!