ಕೊಲೆಯಾದ ಸ್ಥಿತಿಯಲ್ಲಿ ಯವಕನ‌ ಶವ ಪತ್ತೆ

0
15
ಸಾವು

ಹುಬ್ಬಳ್ಳಿ: ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ‌ ಶಿವಳ್ಳಿ ರಸ್ತೆಯಲ್ಲಿ ನಡೆದಿದೆ.
ಅಪರಿಚಿತ‌ ಯುವಕನೊಬ್ಬ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಗಿದೆ. ಹುಬ್ಬಳ್ಳಿ- ಶಿವಳ್ಳಿ ರಸ್ತೆಯಲ್ಲಿರುವ ಬ್ರಿಜ್ ಕೆಳಗೆ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಮೃತದೇಹವನ್ನು ಬಿಸಾಡಿ ಹೋಗಿದ್ದಾರೆ.ಹತ್ಯೆಯಾದವನ ಗುರುತು ಪತ್ತೆಯಾಗಿಲ್ಲ. ಸುಮರು 30ರ ಅಸುಪಾಸಿನ ವ್ಯಕ್ತಿಯ ಕತ್ತು‌ ಕೊಯ್ದು ಹಾಗೂ ಎದೆಗೆ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಶಿವಳ್ಳಿ ರಸ್ತೆಯ ಬ್ರಿಜ್‌ ಕೆಳಗೆ ಬಿಸಾಕಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅಶೋಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ ಆಸ್ಪತ್ರೆಗೆ ರವಾನಿಸಿದ್ದಾರೆ

Previous articleಮರಳಿ ಸಿಕ್ಕ ಚಿನ್ನದ ತಾಳಿ: ಕುಟುಂಬಸ್ಥರ ಮೊಗದಲ್ಲಿ ಮಂದಹಾಸ
Next articleಹಾಡಿನ ಮೂಲಕ ಸಂಬಂಧ ಮೌಲ್ಯ ತಿಳಿಸಿದ ಡಾಲಿ