ಸೌಜನ್ಯ ಹೊಸ ಮೂರ್ತಿ

0
15

ಮಂಗಳೂರು: ೨೦೧೨ರಲ್ಲಿ ದುಷ್ಟರಿಗೆ ಬಲಿಯಾದ ಸೌಜನ್ಯಾಳ ೨೮ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ ಕುಟುಂಬ ಸದಸ್ಯರು, ಆಕೆಯ ಸಮಾಧಿ ಬಳಿ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಹನ್ನೊಂದು ವರ್ಷಗಳ ಹಿಂದೆ ಸೌಜನ್ಯಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಸೌಜನ್ಯ ಈಗ ಜೀವಂತವಾಗಿದ್ದರೆ ಆಕೆ ತನ್ನ ೨೮ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಳು. ಆದರೆ, ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಶಪಥ ಮಾಡಿರುವ ಕುಟುಂಬ ಸದಸ್ಯರು ಅ.೧೮ರಂದು ಸೌಜನ್ಯಾಳ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ೧.೫ ಅಡಿ ಎತ್ತರದ ಕಲ್ಲಿನ ಪ್ರತಿಮೆಯನ್ನು ನಿರ್ಮಿಸಿ ಅದನ್ನು ತಂದು ಸೌಜನ್ಯಾಳ ಸಮಾಧಿ ಬಳಿ ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಿದ್ದಾರೆ. ಸೌಜನ್ಯಾ ಮೂರ್ತಿಯು ಕೂತಿರುವ ಭಂಗಿಯಲ್ಲಿದ್ದು, ಕಲ್ಲಿನ ಪ್ರತಿಮೆ ಪ್ರತಿಷ್ಠಾಪನೆಗೊಳಿಸಿ ನವರಾತ್ರಿ ಅಂಗವಾಗಿ ಭಜನೋತ್ಸವ ಮಾಡಲಾಗಿದೆ.
ಸೌಜನ್ಯ ನಿವಾಸದಲ್ಲಿ ಆಕೆಯ ಸಮಾಧಿ ಬಳಿಯೇ ಈ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ವೇಳೆ ಸುಳ್ಯ ಭಾಗದ ಸೌಜನ್ಯಾಪರ ನ್ಯಾಯಕ್ಕಾಗಿ ಹೋರಾಟ ಮಾಡಿದವರು ಹಾಗೂ ವಿವಿಧ ಪಕ್ಷಗಳು ಮುಖಂಡರು ಕುಟುಂಬ ಸದಸ್ಯರಿಗೆ ಸೌಜನ್ಯಾಳ ಪ್ರತಿಮೆ ಪ್ರತಿಷ್ಠಾಪನೆಗೆ ಸಾಥ್ ನೀಡಿದ್ದಾರೆ. ಎಲ್ಲರೂ ಸೇರಿ ಸೌಜನ್ಯಾ ಚಾಮುಂಡೇಶ್ವರಿಯ ಸ್ವರೂಪವಾಗಿ ಲಕ್ಷಾಂತರ ಜನರಿಗೆ ಅಭಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Previous articleಬಾಲಕನಿಗೆ ಪಿಎಸ್‌ಐ ಕಪಾಳಮೋಕ್ಷ: ಸಾರ್ವಜನಿಕರಿಂದ ಪ್ರತಿಭಟನೆ
Next articleನಿಪ್ಪಾಣಿಯಲ್ಲಿ ಬಾಲಕನ ಕೊಲೆ