ಸದಸ್ಯರಿಂದಲೇ ಗ್ರಾಪಂ ಅಧ್ಯಕ್ಷನ ಮೇಲೆ ಹಲ್ಲೆ

0
33

ನಾಗಮಂಗಲ(ಮಂಡ್ಯ): ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಪಂ ಅಧ್ಯಕ್ಷ ಜಯಕುಮಾರ್ ಮೇಲೆ ಗ್ರಾಪಂ ಸದಸ್ಯರೇ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಲಾಳನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರಕೆರೆ ಗ್ರಾಮದ ನಿವಾಸಿ ಜಯಕುಮಾರ್ ಮೇಲೆ ಅದೇ ಗ್ರಾಪಂನ ಮಂಜುನಾಥ್, ಹನುಮನಕೊಪ್ಪಲು ಗ್ರಾಮದ ಅನಿಲ್ ಕುಮಾರ್ ಹಾಗೂ ಪಿಡ್ಡೇಕೊಪ್ಪಲು ಗ್ರಾಮದ ಮನು ಎಂಬ ಸದಸ್ಯರುಗಳೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸದಸ್ಯರು ಹೇಳಿದ ಕಾಮಗಾರಿಗಳ ಬಿಲ್‌ಗೆ ಅಧ್ಯಕ್ಷರು ಸಹಿ ಹಾಕಿಲ್ಲ ಎಂಬ ವಿಷಯಕ್ಕೆ ಗಲಾಟೆ ನಡೆದಿದ್ದು, ಗಲಾಟೆ ಬಿಡಿಸಲು ಮುಂದಾದ ಅಧ್ಯಕ್ಷರ ಹೆಂಡತಿ ಮೇಲೂ ಹಲ್ಲೆಗೆ ನಡೆಸಲಾಗಿದೆ. ಗಾಯಾಳುಗಳನ್ನು ಬಿಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Previous articleSBI ಈಗ ಶಿವಕುಮಾರ್‌ ಬ್ಯಾಂಕ್‌ ಆಫ್‌ ಇಂಡಿಯಾ!
Next articleಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಪ್ರಕರಣ: ಸಾವಿನ ಸಂಖ್ಯೆ 6ಕ್ಕೆ ಏರಿಕೆ