ಶ್ರೀರಂಗಪಟ್ಟಣ ದಸರಾ ಮ್ಯಾರಥಾನ್ ಗೆ ಚಾಲನೆ

0
13

ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ ಸ್ಪರ್ಧೆಗೆ ಉಪವಿಭಾಗಾಧಿಕಾರಿ ನಂದೀಶ್ ಅವರು ಚಾಲನೆ ನೀಡಿದರು.

29 ವರ್ಷ ಒಳಗಿನ, 29 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು ನಾಲ್ಕು ‌ವಿಭಾಗಗಳಲ್ಲಿ ಸುಮಾರು 250 ಅಭ್ಯರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಸ್ಪರ್ಧೆಯು ಒಟ್ಟು 5 ಕಿ.ಮೀ ವ್ಯಾಪ್ತಿ ಒಳಗೊಂಡಿದ್ದು, ಸ್ಪರ್ಧಾರ್ಥಿಗಳು ತಾಲ್ಲೂಕು ಕ್ರೀಡಾಂಗಣದಿಂದ ನಿಮಿಷಾಂಭ ದೇವಸ್ಥಾನದ ರಸ್ತೆ ಮೂಲಕ ಓಟ ನಡೆಸಿ ಕರಿಘಟ್ಟದ ಪಾದದ ಹತ್ತಿರ ಸಮಾರೋಪಗೊಂಡಿತ್ತು.

ವಿಜೇತರ ವಿವರ: 29 ವರ್ಷದ ಒಳಗಿನ ಪುರುಷರ ವಿಭಾಗ; ಮಣಿಕಂಠ, ಭರತ್ ದ್ಯಾವಪ್ಪ, ದೊರೆ ಹೆಚ್.ಡಿ
29 ವರ್ಷದ ಒಳಗಿನ ಮಹಿಳೆಯರು; ಜಯಶ್ರೀ ಎಸ್, ವೈಶ್ಣವಿ, ಯಶಸ್ವಿನಿ ಎಸ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡರು.

30 ವರ್ಷದ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಮಂಜುನಾಥ ಎಂ.ಎ, ಉದಯ ಬಿಲ್ವ, ಶಿವಲಿಂಗ ದಳವಾಯಿ, 30 ವರ್ಷದ ಮೇಲ್ಪಟ್ಟ ಮಹಿಳೆಯರ ವಿಭಾಗದಲ್ಲಿ : ವಿಜಯಾ ಎಸ್.ಜಿ, ಶೋಭ ಎನ್ ಆರ್, ಶೃತಿ ಎನ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡರು‌.

ವಿಜೇತರಿಗೆ ಪ್ರಥಮ ಬಹುಮಾನ- 3000/-, ದ್ವಿತೀಯ- 2000/- ಹಾಗೂ ತೃತೀಯ ಬಹುಮಾನ- 1000/- ರೂ ನಗದು ಬಹುಮಾನ, ಟ್ರೋಪಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಜಿಲ್ಲಾ ಆಯುಷ್ ಅಧಿಕಾರಿ ಡಾ: ಸೀತಾಲಕ್ಷ್ಮಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Previous articleಕನ್ನಡಿಗರ ಹಣ ಹೊರ ರಾಜ್ಯದ ಚುನಾವಣೆಗೆ
Next articleಸತ್ಯಾಸತ್ಯತೆ ಸ್ವ ಪಕ್ಷದವರಿಂದಲೇ ಬಹಿರಂಗ