ದಶಪಥ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ.!

0
11

ಶ್ರೀರಂಗಪಟ್ಟಣ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾರುಗಳ ಸರಣಿ ಅಪಘಾತ ಸಂಭವಿಸಿದ್ದು ಅಪಘಾತದ ವೇಳೆ ಕಾರೊಂದು ಬೆಂಕಿಯಿಂದ ಹೊತ್ತಿ ಉರಿದಿದೆ.
ತಾಲ್ಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಈ ಘಟನೆ ಸಂಭವಿಸಿದ್ದು, ಬೆಂಗಳೂರು ಕಡೆಯಿಂದ ಮೈಸೂರು ಕಡೆ ತೆರಳುವಾಗ ಹೆದ್ದಾರಿಯಲ್ಲಿ ಅತೀವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂಬದಿಯ ಮೂರ್ನಾಲ್ಕು ಕಾರುಗಳು ಜಖಂ ಗೊಂಡಿವೆ.
ಕಾರಿನಲ್ಲಿ ಇದ್ದವರನ್ನ ಸ್ಥಳೀಯರು ಹಾಗೂ ಪೋಲೀಸರು ರಕ್ಷಣೆ ಮಾಡಿದ್ದು,‌ ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ವೇಳೆ ಕಿಟಕಿ ಗ್ಲಾಜ್ ಹೊಡೆದು ಸುಟ್ಟು ಹೋದ ಕಾರಿನಲ್ಲಿದ್ದವರನ್ನು ಸಹ ರಕ್ಷಿಸಲಾಗಿದೆ. ಮಂಡ್ಯದಿಂದ ಶ್ರೀರಂಗಪಟ್ಟಣ ಕಡೆಗೆ ಹೋಗುತ್ತಿದ್ದ ಮಂಡ್ಯ ಎಸ್ ಪಿ ಯತೀಶ್ ರವರ ಕಾರು ಸಹ ಜಖಂಗೊಂಡಿದ್ದು, ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Previous articleರಾಜಯೋಗದಲ್ಲಿ BA ಕಲಿತ ಗಂಡು
Next articleಶ್ರೀರಂಗಪಟ್ಟಣ ‌ದಸರಾ ಸಕಲ ಸಿದ್ದತೆ: ಶಾಸಕ ಎ.ಬಿ.ರಮೇಶ್ ಬಂಡೀಸಿದ್ದೇಗೌಡ