ಅಂದು ಸೋತಿದ್ದೆ… ಇಂದು ಉದ್ಘಾಟಿಸಿದೆ…

0
11

ಮೈಸೂರು: ಅಂದು ದಸರಾ ಕ್ರೀಡಾಕೂಟದಲ್ಲಿ ಸೋತು ಹೋಗಿದ್ದೆ. ಇವತ್ತು ಇದೇ ಕ್ರೀಡಾಕೂಟದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ್ದು ಹೆಮ್ಮೆ ತಂದಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್ 2023ರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ಈ ವರ್ಷದ ದಸರಾ ಕ್ರೀಡಾಕೂಟ ಬಹಳ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ತಮ್ಮೆಲ್ಲರಿಗೂ ಕೂಡ ಶುಭ ಹಾರೈಸಲು ಬಂದಿದ್ದೇನೆ. ಒಂದು ಪ್ರಮುಖ ವಿಚಾರವನ್ನು ಹೇಳಲು ಇಚ್ಛಿಸುತ್ತೇನೆ. ನನಗೀಗ 61 ವರ್ಷ ಆಗಿದೆ. ನಿಮ್ಮಂತೆ ನಾನು ಕೂಡ ನನ್ನ 16ನೇ ವಯಸ್ಸಿನಲ್ಲಿ ದಸರಾ ಕ್ರೀಡಾಕೂಟದ ವೇಳೆ ಜಾವೆಲಿನ್ ಎಸೆಯಲು ಮತ್ತು ಜ್ಯೂನಿಯರ್ ವಿಭಾಗದಲ್ಲಿ 14.5 ಕಿ.ಮೀ ರನ್ನಿಂಗ್‌ನಲ್ಲಿ ಸ್ಪರ್ಧಿಸಿ ಸೋತು ಹೋಗಿದ್ದೆ. ಇವತ್ತು ಇದೇ ಕ್ರೀಡಾಕೂಟದಲ್ಲಿ ಆಗಮಿಸಿ ಬಹಳ ಸಂತೋಷದಿಂದ ಕಾರ್ಯಕ್ರಮ ಉದ್ಘಾಟಿಸಿದ್ದು ಹೆಮ್ಮೆ ತಂದಿದೆ. ನಿಮ್ಮೆಲ್ಲರಿಗೂ ಶುಭವಾಗಲಿ. ಮುಂದಿನ ದಿನಗಳಲ್ಲಿ ನನ್ನಂತೆ ನೀವೆಲ್ಲರೂ ನಾಯಕರಾಗಬೇಕು. ಗ್ರಾಮೀಣ ಭಾಗದಿಂದ ಬಂದಿರುವ ಕ್ರೀಡಾ ಪ್ರತಿಭೆಗಳು ದೇಶದ ಆಸ್ತಿಯಾಗಿ ಬೆಳೆಯಬೇಕು. ಹಿಂದೆ ಕ್ರೀಡಾಪಟುಗಳಿಗೆ ಅಷ್ಟೊಂದು ಕ್ರೀಡಾ ಸೌಕರ್ಯ, ಪ್ರೋತ್ಸಾಹ ಸಿಗುತ್ತಿರಲಿಲ್ಲ. ಕ್ರೀಡಾಪಟುಗಳಿಗೆ ಈಗ ಸರ್ಕಾರದಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

Previous articleರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷರಾಗಿ ಸುಖ್‌ದೇವ್
Next articleಜನತಾ ದರ್ಶನ ಮತ್ತೆ ತಬರನಾಗಿಸದಿರಿ…