ಕಾಫಿನಾಡಲ್ಲಿ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಹಾವು

0
10

ಚಿಕ್ಕಮಗಳೂರು: ಕಾಫಿನಾಡಾದ ಕಳಸದಲ್ಲಿ ಈ ಅಪರೂಪದ ಬ್ಯಾಂಬೋ ಪಿಟ್ ವೈಫರ್ ಎಂಬ ಹಾವು ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುವ, ಅಳಿವಿನಂಚಿನ ಹಾವು ಇದಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ದೇವಸ್ಥಾನದ ಪಕ್ಕದ ಚಂದ್ರು ಭಟ್ ಅವರ ಮನೆಯ ಅಂಗಳದಲ್ಲಿ ಬ್ಯಾಂಬೋ ಪಿಟ್ ವೈಫರ್ ಹಾವು ಕಂಡುಬಂದಿದೆ.
ಹೆಚ್ಚಾಗಿ ಬಿದಿರಿನ ಬೊಂಬುಗಳಲ್ಲಿ ವಾಸವಿರುವ ಕಾರಣ ಇದಕ್ಕೆ ಬ್ಯಾಂಬೋ ಪಿಟ್ ವೈಫರ್ ಎಂದು ಕರೆಯಲಾಗುತ್ತದೆ. ಈ ಹಾವು ಕಡಿದರೆ ಸಾಯುವುದಿಲ್ಲ. ಆದರೆ ಮತ್ತಿನಲ್ಲಿದ್ದು, ಜ್ಞಾನ ತಪ್ಪುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ಅಪರೂಪದ ಹಾವಿನ ಸೌಂದರ್ಯ ನೋಡಿ ಸ್ಥಳೀಯರು ಖುಷಿ ಪಟ್ಟಿದ್ದಾರೆ. ಉರಗ ತಜ್ಞ ರಿಜ್ವಾನ್ ವರು ಈ ಅಪರೂಪದ ಹಾವನ್ನ ಸೆರೆ ಹಿಡಿದು, ಅರಣ್ಯದೊಳಕ್ಕೆ ಬಿಟ್ಟುಬಂದಿದಾರೆ.

Previous article`ಗಣಪನಿಗೆ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ’ ಸ್ಪರ್ಧೆ ವಿಜೇತರಿಗೆ 9ರಂದು ಬಹುಮಾನ ವಿತರಣೆ
Next articleಸ್ವರ್ಣ ಸಂಭ್ರಮ: ಲಕ್ಕಿ ಡ್ರಾ 9ರಂದು