ಹಮಾಸ್ ಉಗ್ರರ ದಾಳಿ: ಯುದ್ಧ ಗೆಲ್ಲುತ್ತೇವೆ ಎಂದ ಇಸ್ರೇಲ್

0
27

ಇಸ್ರೇಲ್: ಹಮಾಸ್ ಉಗ್ರಗಾಮಿಗಳು ಏಕಾಏಕಿ ಇಸ್ರೇಲ್ ಮೇಲೆ 5,000 ರಾಕೆಟ್‌ಗಳಿಂದ ದಾಳಿ ನಡೆಸಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷದ ಮುಂದುವರೆದ ಭಾಗ ಇದಾಗಿದ್ದು, ಹಮಾಸ್ ಭಯೋತ್ಪಾದಕ ದಾಳಿಯ ಬಳಿಕ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗಲಾಂಟ್ ತಮ್ಮ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ. ಹಮಾಸ್ ಭಯೋತ್ಪಾದಕರು ತಪ್ಪು ಎಸಗಿದ್ದಾರೆ. ಇಸ್ರೇಲ್ ಭದ್ರತಾ ಸಂಸ್ಥೆಗಳ ಸೈನಿಕರು ಎಲ್ಲೆಡೆ ಹಮಾಸ್ ಉಗ್ರರ ವಿರುದ್ಧ ಹೋರಾಡುತ್ತಿದ್ದಾರೆ. ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ನಾನು ಇಸ್ರೇಲ್‌ನ ಎಲ್ಲಾ ನಾಗರಿಕರಿಗೆ ಕರೆ ನೀಡುತ್ತೇನೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ ಎಂದಿದ್ದಾರೆ.
ಪ್ರಧಾನಿ ನೆತನ್ಯಾಹು ಈ ಕುರಿತು ಮಾತನಾಡಿ ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ನೂರಾರು ಸಂಖ್ಯೆಯಲ್ಲಿ ಉಗ್ರರು ಇಸ್ರೇಲ್ ಒಳಗೆ ನುಸುಳಿ, ಅಲ್ಲಿನ ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ. ಇಸ್ರೇಲ್‌ನಲ್ಲಿ ಅಪಾರ ಸಂಖ್ಯೆಯ ಸಾವು ನೋವು ಉಂಟಾಗಿವೆ.

Previous articleಶಾಮನೂರು ಶಿವಶಂಕರಪ್ಪ ಪ್ರಶ್ನೆಗೆ ಸಿಎಂ ಉತ್ತರಿಸಲಿ
Next articleಬರ ತಂಡದೆದರು ಅಳಲು ತೋಡಿಕೊಂಡ ರೈತರು