ಬೆಳಗಾವಿ: ನಿಪ್ಪಾಣಿಯ ಯುವಕನನ್ನು ಆತನ ಸ್ನೇಹಿತರೇ ಕರೆದೊಯ್ದು ಕೊಲೆ ಮಾಡಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಹುಕ್ಕೇರಿ ಮೂಲ ನಿವಾಸಿ ರಾಹುಲ್(30) ಎಂದು ಗುರುತಿಸಲಾಗಿದೆ. ಮಾರ್ಕೆಟಿಂಗ್ ಕೆಲಸದಲ್ಲಿ ತೊಡಗಿದ್ದ ಈತ ನಿಪ್ಪಾಣಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ ಎನ್ನಲಾಗಿದೆ.
ಸೋಮವಾರ ರಾತ್ರಿ ಬೈಕಿನಲ್ಲಿ ಬಂದ ಆತನ ಇಬ್ಬರು ಸ್ನೇಹಿತರು ಈತನನ್ನು ತಮ್ಮೊಂದಿಗೆ ಬೈಕಿನಲ್ಲಿ ಸುಮಾರು ೬೦ ಕಿಮೀ ಮಹಾರಾಷ್ಟ್ರದ ಭೂದರಗಢ ತಾಲೂಕಿಗೆ ಕರೆದೊಯ್ದು ಕೋಟೆ ಬಳಿ ಅಜ್ಞಾತ ಪ್ರದೇಶದಲ್ಲಿ ಕತ್ತುಕೊಯ್ದು ಕೊಲೆ ಮಾಡಿದ್ದಾರೆ. ಯುವಕ ನಾಪತ್ತೆಯಾಗಿರುವ ಬಗ್ಗೆ ಆತನ ಮನೆಯವರು ನೀಡಿದ ದೂರಿನಂತೆ ನಿಪ್ಪಾಣಿ ಶಹರ ಪೊಲೀಸರು ತನಿಖೆ ನಡೆಸಿದಾಗ ಕೊಲೆಯಾಗಿರುವುದು ಪತ್ತೆಯಾಗಿದೆ. ಈತನ ಹತ್ಯೆ ನಡೆಸಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



























