ಮತ್ತೆ ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ವಾಗ್ದಾಳಿ

0
22

ಮಂಡ್ಯ: ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರಗಳಿಂದ ಹೆಚ್ಚಾಗಿ ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಾಯಕರುಗಳ ನಡುವೆ ಮಾತಿನ ಯುದ್ಧ ಜೋರಾಗಿತ್ತು. ಇದೀಗ ಮತ್ತೆ ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ಅವರು ವಾಗ್ದಾಳಿ ನಡೆಸಿದ್ದಾರೆ.

ಸಂಸದೆ ಸುಮಲತಾ ಅವರು ಮಾತನಾಡಿದರುಅಧಿವೇಶನ ವೇಳೆ ದಿಶಾ ಸಭೆ ನಿಗದಿ ವಿಚಾರವಾಗಿ ಮಾತನಾಡಿದ ಅವರು, 3 ವರ್ಷಗಳಲ್ಲಿ ನಡೆದ ದಿಶಾ ಸಭೆಗೆ ಎಷ್ಟು ಬಾರಿ ಶಾಸಕರು ಹಾಜರಾಗಿದ್ದಾರೆ. 2 ವರ್ಷಗಳಲ್ಲಿ ಒಂದೇ ಒಂದು ಸಭೆಗೆ ಜೆಡಿಎಸ್ ಶಾಸಕರು ಬಂದಿಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ನಾನು ನಿಂತಾಗ ಎಲ್ಲರೂ ಸಭೆಗೆ ಹಾಜರಾಗಿದ್ದರು.ಕೆಲವೊಮ್ಮೆ ಅಧಿವೇಶನ ಸಂದರ್ಭದಲ್ಲೂ ಸಭೆ ನಡೆಸಬೇಕಾಗುತ್ತದೆ. ಈಗ ಹೆಚ್ಚು ಮಳೆಯಾಗಿ ರಸ್ತೆ, ಮನೆ, ಬೆಳೆ ಹಾನಿಯಾಗಿದೆ. ಹಾಗಾಗಿ ತುರ್ತು ಸಭೆ ನಡೆಸಿ ಜನರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ಅದು ಬಿಟ್ಟು ರಾಜಕಾರಣ ಮಾಡೋದಕ್ಕೆ ಆಗುತ್ತಾ.? ಎಂದು ಪ್ರಶ್ನಿಸಿದರು.

Previous articleವಿಮ್ಸ್ಗೆ ಭೇಟಿನೀಡಿದ ಡಾ. ಸ್ಮಿತಾ ನೇತೃತ್ವದ ವಿಶೇಷ ತಂಡ
Next articleಬಿಜೆಪಿ ಸರಕಾರದಿಂದ ನಾರಾಯಣಗುರುಗಳಿಗೆ ಅವಮಾನ