ಪುಣೆ: ಸಾನೆ ಗುರೂಜಿ ತರುಣ್ ಮಂಡಲ ಸ್ಥಾಪಿಸಿದ ಗಣೇಶನ ಮಂಟಪದಲ್ಲಿದ್ದ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮಹರಾಷ್ಟ್ರ ಸಿಎಂ ಏಕನಾಥ ಶಿಂಧೆ ಆರತಿ ಮಾಡುತ್ತಿದ್ದ ವೇಳೆ ಮಂಟಪದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಭದ್ರತಾ ಸಿಬ್ಬಂದಿ ಎಲ್ಲರನ್ನೂ ಹೊರಗೆ ಕರೆದೊಯ್ದಿದ್ದಾರೆ. ಬೆಂಕಿಯಿಂದಾಗಿ ನಡ್ಡಾ ಆರತಿಯನ್ನು ಅರ್ಧಕ್ಕೆ ಬಿಟ್ಟು ಹೊರ ನಡೆದಿದ್ದಾರೆ. ಭಾರೀ ಅನಾಹುತ ತಪ್ಪಿದ್ದು, ಬೆಂಕಿಗೆ ಕಾರಣ ಸ್ಪಷ್ಟವಾಗಿಲ್ಲ.