ಪಲ್ಲಕೆಲೆ: ಭಾರತ-ನೇಪಾಳ ನಡುವಿನ ಏಷ್ಯಾಕಪ್ ಪಂದ್ಯದ ಮೂಲಕ ಭಾರತದ ಮಾಜಿ ವೇಗಿ, ಕರ್ನಾಟಕದ ಜಾವಗಲ್ ಶ್ರೀನಾಥ್ ೨೫೦ನೇ ಐಸಿಸಿ ಪುರುಷರ ಏಕದಿನ ಪಂದ್ಯಕ್ಕೆ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ ನಾಲ್ಕನೇ ವ್ಯಕ್ತಿ ಎಂಬ ಖ್ಯಾತಿಗೆ ಶ್ರೀನಾಥ ಪಾತ್ರರಾಗಿದ್ದಾರೆ.