ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರ: ಕಾವೇರಿ ನದಿಗೆ 4398 ಕ್ಯೂಸೆಕ್ ನೀರು

0
11
ಸಾಂದರ್ಭಿಕ ಚಿತ್ರ

ಮಂಡ್ಯ : ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಬೆನ್ನಲ್ಲೇ ರೈತರ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡುವ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
ಪ್ರತಿನಿತ್ಯ 5,000 ಕ್ಯೂ ಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿದ್ದ ಶಿಫಾರಸನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿದ್ದು,15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿತ್ತು.
ಕಾವೇರಿ ಕೊಳ್ಳದ ರೈತರು ಪ್ರಾಧಿಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಶಾಸಕ ಸೇರಿ ಸಂಘಟನೆಗಳ ಮುಖಂಡರು ಯಾವುದೇ ಕಾರಣಕ್ಕೂ ನೀರು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸಿದ್ದರು,ಆದರೆ ಸರ್ಕಾರ ರೈತರ ವಿರೋಧದ ನಡುವೆಯೂ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದೆ
ಮಂಗಳವಾರ ಬೆಳಿಗ್ಗೆ ನದಿಗೆ 2293 ಕ್ಯೂ ಸೆಕ್ ಬಿಡಲಾಗಿತ್ತು,ಸಂಜೆ ವೇಳೆಯೂ 2292 ಕ್ಯೂ ಸೆಕ್ ಬಿಡಲಾಗಿದ್ದರೆ, ರಾತ್ರೋರಾತ್ರಿ 2000 ಕ್ಕೂ ಹೆಚ್ಚು ಕ್ಯೂಸೆಕ್ ಹೆಚ್ಚಿಸಲಾಗಿದ್ದು, ಬುಧವಾರ ಮುಂಜಾನೆ ವೇಳೆಗೆ ನದಿಗೆ ಹರಿಸಲಾಗಿರುವ ನೀರಿನ ಪ್ರಮಾಣ 4398 ಕ್ಕೆ ಹೆಚ್ಚಳವಾಗಿದೆ. ಜಲಾಶಯಕ್ಕೆ 2300 ಕ್ಯೂಸೆಕ್ ಒಳಹರಿವು ಇದ್ದು,101.58 ಅಡಿ ನೀರು ಇದೆ.
ಅಣೆಕಟ್ಟಿನ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು.ಟಿಎಂಸಿ ಲೆಕ್ಕದಲ್ಲಿ ಗರಿಷ್ಠ 49.452 ನೀರು ಸಂಗ್ರಹ ಮಾಡಬಹುದಾಗಿದೆ.ಆದರೆ ಸದ್ಯ
24.075 ಟಿಎಂಸಿ ನೀರು ಇದೆ, ಒಟ್ಟು ನೀರಿನಲ್ಲಿ 4.40 ಟಿಎಂಸಿ ನೀರು ಡೆಡ್ ಸ್ಟೋರೇಜ್, ಇದನ್ನು ಗಮನಿಸಿದಾಗ ಬಳಕೆಗೆ ಯೋಗ್ಯವಿರುವುದು ಕೇವಲ 20 ಟಿಎಂಸಿ ಮಾತ್ರವಾಗಿದೆ.ಪ್ರಾಧಿಕಾರದ ಆದೇಶ ದಂತೆ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ಹದಿನೈದು ದಿನಗಳ ವರೆಗೆ ಹರಿಸಿದ್ದೇ ಆದರೆ ಒಟ್ಟು 6.25 ಟಿಎಂಸಿ ನೀರು ಬಿಟ್ಟ ಹಾಗೆ ಆಗುತ್ತದೆ. ಈಗಿನ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಆಗ ಕೆಆರ್‌ಎಸ್‌ ನಲ್ಲಿನ ನೀರಿನ ಪ್ರಮಾಣ ತಳಮಟ್ಟ ಕಾಣಲಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ

Previous articleತಮಿಳುನಾಡಿಗೆ ನೀರು: ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಅನಿರ್ಧಿಷ್ಠಾವಧಿ ಧರಣಿ
Next articleBBMP ಕಚೇರಿಯಲ್ಲಿ ಬೆಂಕಿ ದುರಂತ ಪ್ರಕರಣ: ಮುಖ್ಯ ಇಂಜಿನಿಯರ್ ಶಿವಕುಮಾರ್ ನಿಧನ