ಶಾರ್ಟ್ ಸರ್ಕ್ಯೂಟ್: ಕಂಟೈನರ್ ಕ್ಯಾಬಿನ್ ನಲ್ಲಿ ಬೆಂಕಿ

0
10

ಕುಷ್ಟಗಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ‌ ಎಸ್.ಬಿ‌ ಪೆಟ್ರೋಲ್ ಬಂಕ್ ಹತ್ತಿರ ಕಂಟೈನರ್
ಲಾರಿಯ ಕ್ಯಾಬೀನ ನಲ್ಲಿ‌ ಏಕಾಏಕಿ ಶಾಟ್೯ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು ಸುಟ್ಟು ಕರಕಲಾಗಿದೆ. ಟೋಯೊಟಾ ಕಂಪನಿಯ ಕಾರುಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೊರಟಿದ್ದ ಕಂಟೈನರ್ ‌ಲಾರಿಯಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು ಕೂಡಲೇ ಚಾಲಕನ ಗಮನಕ್ಕೆ ಬಂದಿದೆ. ತಕ್ಷಣ ಚಾಲಕ ಕಂಟೇನರ್ ಲಾರಿಯನ್ನು ನಿಲ್ಲಿಸಿ ಕೆಳಗೆ ಇಳಿಯುತ್ತಿದ್ದಂತೆ ಕ್ಯಾಬೀನಲ್ಲಿ
ಬೆಂಕಿ ಆವರಿಸಿಕೊಂಡಿದೆ. ಗಾಳಿಯೂ‌ ಇದ್ದಿದ್ದರಿಂದ ಬೆಂಕಿಯ ತೀವ್ರತೆ ಜಾಸ್ತಿಯಾಗಿತ್ತು. ಕೂಡಲೇ ಅಗ್ನಿಶಾಮಕ ವಾಹನ ದೌಡಾಯಿಸಿ ಬೆಂಕಿ ನಿಯಂತ್ರಿಸಿತು.

Previous articleಕಾಮ-ಕ್ರೋಧಗಳ ಉದ್ವೇಗ ಕಡಿಮೆಯಾಗಬೇಕು
Next articleನೂರು ದಿನಗಳ ಆಡಳಿತ ಗ್ಯಾರಂಟಿ ಜಾರಿಯಷ್ಟೇ ಖಚಿತ