ಕನ್ನಡ ಚಿತ್ರರಂಗಕ್ಕೆ ಶುಭ ಹಾರೈಸಿದ ಸಿಎಂ

0
8

ಬೆಂಗಳೂರು: ೬೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ೨೦೨೧ ಪ್ರಕಟವಾಗಿದ್ದು, ಕನ್ನಡಕ್ಕೆ 4 ಪ್ರಶಸ್ತಿಗಳು ಲಭಿಸಿವೆ. ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಕಿರಣ್ ರಾಜ್ ನಿರ್ದೇಶನದ ೭೭೭ ಚಾರ್ಲಿ ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಜೇಕಬ್ ವರ್ಗೀಸ್ ನಿರ್ದೇಶನದ ಸಾಕ್ಷ್ಯಚಿತ್ರ ಆಯುಷ್ಮಾನ್‌ಗೆ ಅತ್ಯುತ್ತಮ ಅನ್ವೇಷಣಾ ಚಿತ್ರ ಪ್ರಶಸ್ತಿ ಲಭಿಸಿದ್ದು, ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿ ಶುಭ ಹಾರೈಸಿದ್ದಾರೆ, ಅವರು ತಮ್ಮ ಸಂದೇಶದಲ್ಲಿ “2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಸಿನೆಮಾಗಳ‌ ಸಾಲಿನಲ್ಲಿ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಪಡೆದ ‘ಚಾರ್ಲಿ 777’ ಚಿತ್ರತಂಡಕ್ಕೆ, ನಾನ್ ಫೀಚರ್ ವಿಭಾಗದ ಅತ್ಯುತ್ತಮ ಅನ್ವೇಷಣೆ ಸಿನಿಮಾ ಪ್ರಶಸ್ತಿ ಗಳಿಸಿದ ‘ಆಯುಷ್ಮಾನ್’ ಚಿತ್ರತಂಡಕ್ಕೆ, ತೀರ್ಪುಗಾರರ ವಿಶೇಷ ಮೆಚ್ಚುಗೆ ಪಡೆದ ನಾನ್ ಫೀಚರ್ ವಿಭಾಗದ ಅನಿರುದ್ಧ್ ಜಟ್ಕರ್ ನಿರ್ದೇಶನದ ‘ಬಾಳೆ ಬಂಗಾರ’ ಡಾಕ್ಯುಮೆಂಟರಿ ನಿರ್ಮಾಣ ತಂಡಕ್ಕೆ ಹಾಗೂ ಅತ್ಯುತ್ತಮ ಸಿನೆಮಾ ವಿಮರ್ಶಕ ( ಸ್ಪೆಷಲ್ ಮೆನ್ಷನ್ – ಕ್ರಿಟಿಕ್) ಪ್ರಶಸ್ತಿ ಗಳಿಸಿದ ಹಿರಿಯ ಪತ್ರಕರ್ತ ಬಿ.ಎನ್‌ ಸುಬ್ರಮಣ್ಯ ಅವರಿಗೆ ಅಭಿನಂದನೆಗಳು. ತಮ್ಮೆಲ್ಲರ ಪರಿಶ್ರಮಕ್ಕೆ ದೊರೆತ ಈ ಪ್ರಶಸ್ತಿಗಳು ನಾಡಿಗೆ ಹೆಮ್ಮೆ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಇಂತಹ ಇನ್ನಷ್ಟು ಸಿನೆಮಾಗಳು ನಮ್ಮಲ್ಲಿ ಮೂಡಿಬರಲಿ, ಈ ದಿಸೆಯಲ್ಲಿ ಕನ್ನಡ ಚಿತ್ರರಂಗದ ಪ್ರಯತ್ನ ಸಾಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.

Previous articleಶಿವಾಜಿ ಮೂರ್ತಿ ತೆರವು ಅಕ್ಷಮ್ಯ ಅಪರಾಧ
Next articleಅಮ್ಮನವರಿಗೆ ನೋಟುಗಳಿಂದ ವಿಶೇಷ ಅಲಂಕಾರ