ಲೋಕಾ ಬಲೆಗೆ ಡಿಡಿಪಿಐ ಕಚೇರಿ ಸಿಬ್ಬಂದಿ

0
17

ಧಾವಾಡ: ಪಿಂಚಣಿ ಹಣ ನೀಡಲು ದಾಖಲಾತಿಗಳನ್ನು ಸರಿಪಡಿಸಿಕೊಡಲಾಗುವುದು ಎಂದು ಹೇಳಿ ೧೫,೦೦೦ ರೂ. ಲಂಚಕ್ಕೆ ಬೇಡಿಕೆ ಇಟ್ಟದ್ದ ಡಿಡಿಪಿಯ ಕಚೇರಿಯ ಇಬ್ಬರು ಸಿಬ್ಬಂದಿ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಿವೃತ್ತ ಉಪನ್ಯಾಸಕ ಸುಭಾಷ ಚವರೆಡ್ಡಿ ಅವರಿಂದ ಪಿಂಚಣಿ ನೀಡಲು ದಾಖಲೆ ಸರಿಪಡಿಸಿಕೊಡಲು ೧೫,೦೦೦ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ವೇಳೆ ಸಿಕ್ಕಿಬಿದ್ದಿದ್ದಾರೆ. ಡಿಡಿಪಿಯು ಕಚೇರಿ ಸೆಕ್ಷನ್ ಅಧಿಕಾರಿ ದುರ್ಗದಾಸ್ ಮಸೂತಿ ಹಾಗೂ ಡಿಡಿಪಿಯು ಎಫ್‌ಡಿಎ ಸಹಾಯಕ ನಾಗರಾಜ್ ಹೂಗಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Previous articleಕಾಂಗ್ರೆಸ್ ಸೇರ್ಪಡೆಯಾದ ಆಯನೂರು ಮಂಜುನಾಥ್
Next articleಪೊಲೀಸ್ ಠಾಣೆ ಸಮೀಪವೇ ಇರಿತ ಯುವತಿ ಸಾವು