ಬೆಂಗಳೂರು: ನಿಮ್ಮನ್ನು ನಿಮ್ಮ ಅಧ್ಯಕ್ಷರೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಚಾಟಿ ಬಿಸಿದ್ದಾರೆ, ಹೈಕಮಾಂಡ್ ನಾಯಕರು ಕರ್ನಾಟಕದ ಬಿಜೆಪಿ ಮೇಲೆ ಎಳ್ಳಷ್ಟೂ ಭರವಸೆ ಇಟ್ಟುಕೊಂಡಿಲ್ಲವೇ? ಎಂದು ಕರ್ನಾಟಕ ಕಾಂಗ್ರೆಸ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಯತ್ನಾಳ ಅವರು “ನಿದ್ದೆ ಮಾಡಿ, ತೂಕಡಿಸುವ ಅಭ್ಯಾಸ ಇರುವುದು ನಿಮ್ಮ ನಾಯಕರಿಗೆ, ನಮಗಲ್ಲ. ಹೌದು ಈ ಟ್ವಿಟ್ಟರ್ ಹ್ಯಾಂಡಲ್ ನಿಂದ ಬಂಡಲ್ ಬಿಡುತ್ತಿದ್ದ ಅವನ್ಯಾರನ್ನೋ ನಿಮ್ಮ ಅಧ್ಯಕ್ಷ ಹುಡುಗರು ಏನೋ ಮಾಡಿದ್ದಾರೆ ಅಂದಿದ್ದರಲ್ಲವಾ? ನಿಮ್ಮನ್ನು ನಿಮ್ಮ ಅಧ್ಯಕ್ಷರೇ ಗಂಭೀರವಾಗಿ ಪರಿಗಣಿಸುವುದಿಲ್ಲ, ನಿಮ್ಮ ಯೋಗ್ಯತೆ ತಿಳಿದುಕೊಳ್ಳಿ” ಎಂದು ಚಾಟಿ ಬಿಸಿದ್ದಾರೆ.