ಹುಬ್ಬಳ್ಳಿ: ಆಗಸ್ಟ್ 15 ರಂದು ಕುಂದಗೋಳ ನಿಲ್ದಾಣದಲ್ಲಿ ಪಾದಾಚಾರಿ ಮೇಲ್ಸೇತುವೆ ಕಾಮಗಾರಿಯ ಸಲುವಾಗಿ ವಿಶ್ವಮಾನವ ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸಲಾಗುತ್ತಿದೆ.
ಆಗಸ್ಟ್ ೧೫ ರಂದು ರೈಲು ಸಂಖ್ಯೆ ೧೭೩೨೬ ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲನ್ನು ಬೀರೂರು ಮತ್ತು ಬೆಳಗಾವಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಬೀರೂರು ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.
ಆಗಸ್ಟ್ ೧೫ ರಂದು ರೈಲು ಸಂಖ್ಯೆ ೧೭೩೨೫ ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿ ಮತ್ತು ಬೀರೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ತನ್ನ ನಿಗದಿತ ಸಮಯದಲ್ಲಿ ಬೀರೂರು ನಿಲ್ದಾಣದಿಂದ ಪ್ರಾರಂಭವಾಗಲಿದೆ.