ಅನೈತಿಕ ಸಂಬಂಧ: ಹೆತ್ತ ಮಗುವನ್ನು ಕೊಂದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ

0
15
ಜೈಲು

ಬೆಳಗಾವಿ: ಅನೈತಿಕ ಸಂಬಂಧದಿಂದ ಹೆತ್ತ ಮಗನನ್ನು ಬಾವಿಯಲ್ಲಿ ದೂಡಿ ಕೊಲೆ ಮಾಡಿದ ಆರೋಪದ ಹಿನ್ನಲ್ಲೆಯಲ್ಲಿ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀಮತಿ ಸುಧಾ ಸುರೇಶ ಕರಿಗಾರ(೩೧) ಇವಳಿಗೆ ಜೀವಾವಧಿ ಶಿಕ್ಷೆ ಮತ್ತು ೭ ಸಾವಿರ ದಂಡ ವಿಧಿಸಿ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ೨೨-೧೦-೨೦೧೯ರಲ್ಲಿ ನಡೆದ ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕೋಡಿ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಅವರು ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ವೈ.ಜಿ.ತುಂಗಳ ವಾದ ಮಂಡಿಸಿದರು.ಘಟನೆ ವಿವರ: ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀಮತಿ ಸುಧಾ ಸುರೇಶ ಕರಿಗಾರ(೩೧) ಇತಳು ಸಾಕ್ಷಿದಾರರಾದ ರಾಮಪ್ಪ ಕೆಂಚಪ್ಪ ಬಸ್ತವಾಡ ಇತನ ಜೊತೆ ಅನೈತಿಕ ಸಂಬಂಧ ಹೊಂದಿದಾಗ ಆರೋಪಿತಳ ಹಿರಿಯ ಮಗ ಪ್ರವೀಣ(೧೦) ತಂದೆಗೆ ಹೇಳುತ್ತೇನೆಂದು ಓಡಿ ಹೋದಾಗ ಅವನಿಗೆ ಕರೆದು ೫೦ ರೂ ಕೊಟ್ಟು ಅಂಗಡಿಯಲ್ಲಿ ತಿನಿಸು ತರಲು ಹೇಳಿ ಕಳಿಸಿದಳು, ಅವನ ಜೊತೆ ಚಿಕ್ಕ ಮಗ ಪ್ರಜ್ವಲ(೮) ಅವನ ಜೊತೆಗೆ ಕಳಿಸಿ ಅವರ ಹಿಂದಿನಿಂದ ಹೋದ ಆರೋಪಿತಳು ಬೆಲ್ಲದ ಬಾಗೇವಾಡಿಉದಯಕುಮಾರ ಮಲ್ಲಿನಾಥ ಪಾಟೀಲ ಎಂಬುವವರ ಜಮೀನಿನಲ್ಲಿರುವ ಬಾವಿಯಲ್ಲಿ ನುಗಿಸಿ ಕೊಲೆ ಮಾಡಿದ್ದಾಳೆ, ಇನ್ನೋಬ್ಬ ಮಗ ಪ್ರಜ್ವಲ ಇವನಿಗೆ ನೀನು ಯಾರ ಮುಂದೆಯಾದರೂ ಹೇಳಿದರೆ ನಿನಗೂ ಸಹ ಹೀಗೆ ಮಾಡಿ ಸಾಯಿಸಿ ಬಿಡುತ್ತೇನೆ ಅಂತ ಜೀವದ ಅಂಜಿಕೆ ಹಾಕಿದ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.ಈ ಪ್ರಕರಣದ ತನಿಖೆ ನಡೆಸಿದ ಅಂದಿನ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಿದ್ದರು.

Previous articleನೇಯ್ಗೆ ಬಂದ್: ಮತ್ತೇ ಅತಂತ್ರದಲ್ಲಿ ಕೈಮಗ್ಗ ನೇಕಾರ
Next articleಆಗಸ್ಟ್ 15 ರಂದು ವಿಶ್ವಮಾನವ ಎಕ್ಸ್ಪ್ರೆಸ್ ರೈಲು ರದ್ದು