ನಾಲ್ವರು ಕಳ್ಳರ ಬಂಧನ: ೧೪ ಮೋಟಾರ್ ಪಂಪಸೆಟ್ ವಶ

0
9


ಚಿಕ್ಕೋಡಿ: ನಾಲ್ವರು ಪಂಪಸೆಟ್ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿರುವ ಗೋಕಾಕ ತಾಲೂಕಿನ ಕುಲಗೋಡ ಠಾಣೆ ಪೊಲೀಸರು ಆರೋಪಿಗಳಿಂದ ೧೪ ಮೋಟಾರ್ ಪಂಪ್‌ಸೆಟ್ ಹಾಗೂ ಎರಡು ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
ಹಡಗಿನಾಳ ಗ್ರಾಮದ ಮಲ್ಲಪ್ಪ ಲಾಡಿ ಎಂಬುವವರು ಆ.೯ರಂದು ತಮ್ಮ ಜಮೀನಿನಲ್ಲಿ ಬೋರವೆಲ್‌ಗೆ ಅಳವಡಿಸಿದ್ದ ೨ ಎಚ್‌ಪಿಯ ವಾಟರ್ ಪಂಪ್‌ಸೆಟ್ ಕಳ್ಳತನವಾಗಿದೆ ಎಂದು ಕುಲಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂಡಲಗಿ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕುಲಗೋಡ ಠಾಣೆ ಪಿಎಸ್‌ಐ ಜಿ.ಎಸ್. ಪಾಟೀಲ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ೨ ಲಕ್ಷ ಮೌಲ್ಯದ ೫ ಎಚ್ಪಿಯ ಮೂರು, ೩.೭ಎಚ್ಪಿಯ ಆರು, ೨.೨ ಎಚ್ಪಿಯ ನಾಲ್ಕು, ೨.೫ ಎಚ್ಪಿಯ ಒಂದು ಸೇರಿ ಒಟ್ಟು ೧೪ ಪಂಪಸೆಟ್ ಹಾಗೂ ಕಳ್ಳತನಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Previous articleನೀರಮಾನ್ವಿ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ
Next articleಹತ್ಯೆಯಾದ ಸೌಜನ್ಯಳ ಪರ ಬೆಳಗಾವಿಯಲ್ಲಿ ಕೂಗು: ಮೃತಳ ಕುಟುಂಬಕ್ಕೆ ನ್ಯಾಯಕ್ಕಾಗಿ ಪಂಜಿನ ಮೆರವಣಿಗೆ