ಮಂಡ್ಯ ಜಿಲ್ಲೆಯನ್ನ ಕಮಾರಸ್ವಾಮಿರವರಿಗೆ ದತ್ತು ಕೊಟ್ಟಿಲ್ಲ

0
25

ನಾಗಮಂಗಲ (ಮಂಡ್ಯ): ಅಧಿಕಾರಿಗಳ ನಕಲಿ ಸಹಿ ಕುಮಾರಸ್ವಾಮಿಯವರೇ ಮಾಡಿರಬಹದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಸಿ ಆರ್ ಎಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಟ್ವಿಟ್ ಮಾಡುವ ಮೂಲಕ ನಕಲಿರಾಮಯ್ಯ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ ನಮ್ಮ ಜಿಲ್ಲೆಯ ಯಾರೊಬ್ಬ ಅಧಿಕಾರಿಗಳು ಸಹಿ ಹಾಕಿರುವ ಬಗ್ಗೆ ಹೇಳಿಕೆ ನೀಡಿಲ್ಲ. ಆದರೂ ಕುಮಾರಸ್ವಾಮಿ ಆರೋಪ ಗಮನಿಸಿದರೆ ಅವರೇ ಸಹಿ ಹಾಕಿ ರಾಜ್ಯಪಾಲರಿಗೆ ಕಳಿಸಿರಬಹುದು. ಒಕ್ಕಲಿಗರ ಏಳ್ಗೆಯನ್ನು ಸಹಿಸದೆ ಈ ರೀತಿ ಮಾತನಾಡುತಿದ್ದಾರೆ. ಮಂಡ್ಯ ಜಿಲ್ಲೆಯನ್ನ ಕಮಾರಸ್ವಾಮಿರವರಿಗೆ ದತ್ತು ಕೊಟ್ಟಿಲ್ಲ ಮಾತಿನ ಮೇಲೆ ಪ್ರಜ್ಞೆ ಇಟ್ಟೊಂಡು ಮಾತನಾಡಬೇಕು. ಇವರ ಆಳ್ವಿಕೆಯಲ್ಲಿ ಏನೇನು ನಡೆದಿದೆ ಎಂಬುದನ್ನ ಈ ರಾಜ್ಯದ ಜನ ಗಮನಿಸಿದ್ದಾರೆ. ಇಂತಹ ಹೇಳಿಕೆಗಳಿಗೆಲ್ಲಾ ಬೆಲೆ ಕೊಡುವ ಪ್ರಶ್ನೆಯೇ ಇಲ್ಲ. ನಾಗಮಂಗಲ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುವರ್ಣ ಹಾಗೂ ಪ್ರೌಢಶಾಲೆಯ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಸಚಿವ ಚಲುವರಾಯಸ್ವಾಮಿ ಇದಕ್ಕೂ ಮುನ್ನ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಾಥಮಿಕ ಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.

Previous articleಸಚಿವ ಚೆಲುವರಾಯಸ್ವಾಮಿಗೆ ಕಳಂಕ ತರಲು ಷಡ್ಯಂತ್ರ
Next articleಬೆಂಗಳೂರಿನಲ್ಲಿ ಬ್ಯಾನ್‌ ಆದ ಬ್ಯಾನರ್‌