ಪಂಪಸೆಟ್ ಕಳ್ಳತನ: ಆರೋಪಿ ಬಂಧನ

0
8
ಐವರ ಬಂಧನ

ಬೆಳಗಾವಿ: ಮಲಪ್ರಭಾ ನದಿಯ ದಂಡೆಯಲ್ಲಿ ಕರೆಂಟ್ ಮೋಟಾರ್ ಪಂಪಸೆಟ್‌ಗಳ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿ ೫ ಲಕ್ಷ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬೈಲಹೊಂಗಲ ತಾಲೂಕಿನ ಇಂಗಳ ಗ್ರಾಮದ ವ್ಯಾಪ್ತಿಯ ಮಲಪ್ರಭಾ ನದಿಯ ದಂಡೆಯ ಜಾಕವೆಲ್ ಹತ್ತಿರ ಹೊಸೂರು ಗ್ರಾಮದ ರೈತರು ಕೂಡ್ರಿಸಿದ್ದ ಕರೆಂಟ್ ಮೋಟಾರ್ ಪಂಪಸೆಟ್‌ಗಳನ್ನು ಕಳ್ಳತನವಾಗಿರುವ ಕುರಿತು ಮುರಗೋಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ಶುಕ್ರವಾರ ನಾಲ್ವರನ್ನು ಬಂದಿಸಿ ೧.೫೦ ಲಕ್ಷ ರೂ. ಮೌಲ್ಯದ ಐದು ಕರೆಂಟ್ ಮೋಟಾರ್ ಪಂಪಸೆಟ್‌ಗಳು ಹಾಗೂ ೩.೫೦ ಲಕ್ಷ ರೂ. ಮೌಲ್ಯದ ಗೂಡ್ಸ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

Previous articleಪೊಲೀಸ್ ಠಾಣೆ ಎದುರು ಬಾಣಂತಿ ಶವ ಇಟ್ಟು ಸಂಬಧಿಕರ ಪ್ರತಿಭಟನೆ
Next articleಭೀಕರ ಅಪಘಾತ: ಓರ್ವ ಯುವಕ ಸಾವು