ವಾಂತಿ-ಭೇದಿ: ಮೂರು ಕುಟುಂಬಗಳು ಆಸ್ಪತ್ರೆಗೆ ದಾಖಲು

0
18

ಕೊಪ್ಪಳ: ವಾಂತಿ-ಬೇಧಿಯಿಂದ ತಾಲ್ಲೂಕಿನ ಕರ್ಕಿಹಳ್ಳಿ ಗ್ರಾಮದ ಮೂರು ಕುಟುಂಬಗಳು ಆಸ್ಪತ್ರೆಗೆ ದಾಖಲಾಗಿವೆ.
ಧಾರ್ಮಿಕ ಕಾರ್ಯಕ್ರಮದ ವೇಳೆ ಇತ್ತೀಚೆಗೆ ಆಹಾರ ಸೇವನೆಯಲ್ಲಿ ವ್ಯತ್ಯಾಸವಾಗಿ ೧೦ ಜನರು ಅಸ್ವಸ್ಥರಾಗಿದ್ದಾರೆ ಎಂಬ ಶಂಕೆ ಇದೆ. ಅಲ್ಲದೇ ಕಳೆದ ಮೂರು ದಿನಗಳ ಹಿಂದೆಯಷ್ಟೇ ತಾಲ್ಲೂಕಿನ ಚಿಲವಾಡಗಿ ಗ್ರಾಮದಲ್ಲಿಯೂ ಕುಡಿಯುವ ನೀರಿನ ಕೊಳವೆಯಲ್ಲಿ ಚರಂಡಿ ನೀರು ಸೇವನೆಯಿಂದ ವಾಂತಿ-ಭೇದಿ ಉಂಟಾಗಿತ್ತು. ಸದ್ಯ ಮತ್ತೊಂದು ಗ್ರಾಮದಲ್ಲಿ ವಾಂತಿ-ಭೇದಿ ಕಂಡುಬಂದಿದ್ದು, ತಾಲ್ಲೂಕಿನ ಇನ್ನಿತರ ಗ್ರಾಮಗಳಲ್ಲಿಯೂ ಭಯದ ವಾತಾವರಣ ಸೃಷ್ಟಿಯಾಗಿದೆ.
ಕರ್ಕಿಹಳ್ಳಿ ಗ್ರಾಮದ ವಾಂತಿ-ಭೇದಿಯಿಂದ ದಾಖಲಾಗಿದ್ದ ಮೂರು ಕುಟುಂಬದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆಹಾರದಲ್ಲಿ ವ್ಯತ್ಯಾಸ ಆಗಿರುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದಿದ್ದು, ಇನ್ನಷ್ಟು ಮಾಹಿತಿ ಲಭಿಸಬೇಕಿದೆ ಡಿಎಚ್‌ಒ ಲಿಂಗರಾಜು ಟಿ. ತಿಳಿಸಿದ್ದಾರೆ.

Previous articleಬಸ್-ಬೈಕ್ ಡಿಕ್ಕಿ: ಇಬ್ಬರು ಸಾವು
Next articleಬಾಗಲಕೋಟೆ: ಹಾಸ್ಟೆಲ್ ಹೊರ ಗುತ್ತಿಗೆ ನೌಕರರಿಂದ ರಾತ್ರಿ ವೇಳೆ ಪ್ರತಿಭಟನೆ….