ಹಿಪ್ಪರಗಿ ಜಲಾಶಯ: ಎಲ್ಲ 22 ಗೇಟ್‌ಗಳಿಂದ ನೀರು ಹೊರಕ್ಕೆ

0
20

ಕೃಷ್ಣಾ ಜಲಾನಯನ ವ್ಯಾಪ್ತಿ ಹಾಗು ವಿವಿಧ ರಾಜ್ಯದ ಜಲಾಶಯಗಳ ಅಧಿಕಾರಿಗಳ ನಡುವೆ ನಿತ್ಯ ನೀರಿನ ಅಂಕಿ-ಅಂಶ ವಿನಿಮಯ. ಒಳ ಹರಿವು ಹೆಚ್ಚಿರುವ ಕಾರಣ, ನೀರಿನ ಮೂಲದ ಕಡೆ ಸತತ ನಿಗಾ, ಎಷ್ಟು ನೀರುಬರಬಹುದು? ಎಂಬ ಲೆಕ್ಕಾಚಾರದ ಆಧಾರದಲ್ಲಿ ಹಿಪ್ಪರಗಿ ಜಲಾಶಯದ ನೀರಿನ ನಿಯಂತ್ರಣ, ನಿರ್ವಹಣೆ ಇದರ ಪರಿಣಾಮ ನೀರನ್ನು ಜಲಾಶಯದಿಂದ ಹೊರಬಿಟ್ಟರೂ ನದಿ ಪಾತ್ರದಲ್ಲಿ ಯಾವದೇ ಮಹಾಪೂರ ಘಟಿಸಿಲ್ಲ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಿಂದ, ಅಲ್ಲಿನ ಕೃಷ್ಣಾ ನದಿಯ ಎಲ್ಲ ಜಲಾಶಯಗಳ ನೀರಿನ ಸ್ಥಿತಿಗತಿ, ಸುರಿಯುತ್ತಿರುವ ಮಳೆಯ ಬಗ್ಗೆ ನಿತ್ಯವೂ ನಿಗಾ ವಹಿಸಿ, ಹಿಪ್ಪರಗಿ ಜಲಾಶಯದ ಎಲ್ಲ 22 ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 522.3 ಮೀ.ನಷ್ಟಿದ್ದು, 1.25 ಲಕ್ಷ ಕ್ಯುಸೆಕ್ ನಷ್ಟು ನೀರಿನ ಒಳಹರಿವಿದ್ದು, ಬಂದಷ್ಟೇ ನೀರನ್ನು ಎಲ್ಲ ಗೇಟ್‌ಗಳ ಮೂಲಕ ಹೊರ ಹಾಕಲಾಗುತ್ತಿದೆ. ಸುತ್ತಲೂ ಪ್ರದೇಶದಲ್ಲಿ ಪ್ರವಾಹದ ಯಾವದೇ ಭೀತಿಯಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಹ್ಯಾದ್ರಿ ಬೆಟ್ಟದಲ್ಲಿ ನಿರಂತರ ಮಳೆಯ ಕಾರಣ ರಾಜಾಪುರ ಹಾಗು ಕಲ್ಲೋಳ್ಳಿ ಬ್ಯಾರೇಜ್‌ನಿಂದ ಭಾರಿ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆ ಕಾರಣ ಹಿಪ್ಪರಗಿ ಜಲಾಶಯದಲ್ಲಿ ಯಾವದೇ ನೀರು ಸಂಗ್ರಹಣೆ ಮಾಡದೆ ಬಂದಷ್ಟೇ ನೀರನ್ನು ಹರಿಬಿಡಲಾಗುತ್ತಿದೆ. ನೀರಿನ ಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿರುವದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಕಲರೀತಿಯಲ್ಲಿ ಅಧಿಕಾರಿಗಳ ತಂಡ ಸಜ್ಜಾಗಿದೆ.

Previous articleಭೀಕರ ರಸ್ತೆ ಅಪಘಾತ: ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆ
Next articleಯುವತಿಯಿಂದ ಸಂಸದ ಜಿ.ಎಂ. ಸಿದ್ದೇಶ್ವರ್‌ಗೆ ಅಶ್ಲೀಲ ವೀಡಿಯೋ ಕಾಲ್: ದೂರು ದಾಖಲು