ಎರಡು ಗುಂಪುಗಳ ನಡುವೆ ಗದ್ದಲ: ಪ್ರಕರಣ ದಾಖಲು

0
12

ಇಳಕಲ್: ಯಾವದೋ ವಿಷಯವಾಗಿ ಎರಡು ಗುಂಪುಗಳ ನಡುವೆ ಗದ್ದಲ ನಡೆದು ಎರಡೂ ಕಡೆ ಪರಸ್ಪರ ದೂರು ದಾಖಲು ಮಾಡಿದ ಪ್ರಸಂಗ ನಗರದಲ್ಲಿ ನಡೆದಿದೆ. ಸೋಮವಾರದಂದು ವಿಜಯ ಮಹಾಂತೇಶ ಗದ್ದುಗೆಗೆ ಹೋಗುವ ಮಾರ್ಗದಲ್ಲಿ ಬಸವರಾಜ ಮತ್ತು ನಾಗರಾಜ ಎಂಬ ವ್ಯಕ್ತಿಗಳ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಲಾಗಿದೆ ಎಂಬ ವಿಷಯ ತಿಳಿದು ಬಂದಾಗ ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಿದರು. ಗಾಯಾಳುಗಳನ್ನು ಕೂಡಲೇ ಸರಕಾರಿ ಆಸ್ಪತ್ರೆಗೆ ಸೇರಿಸಿ ಉಪಚಾರ ನೀಡಲಾದರೂ ನಂತರ ಅವರನ್ನು ಬಾಗಲಕೋಟ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಇತ್ತ ಪ್ರಕರಣದಲ್ಲಿ ಭಾಗಿಯಾದ ಶ್ರೀನಿವಾಸ ಎಂಬುವವರನ್ನು ಕರೆತಂದು ಆತನನ್ನು ಸಹ ಆಸ್ಪತ್ರೆಗೆ ಸೇರಿಸಲಾಯಿತು . ಎರಡೂ ಕಡೆಯಿಂದ ಪರಸ್ಪರ ದೂರುಗಳನ್ನು ದಾಖಲು ಮಾಡಲಾಗಿದೆ ಆದರೆ ಇವರೆಗೆ ಯಾರನ್ನೂ ಬಂಧಿಸಿಲ್ಲವಾದರೂ ಡಿವಾಯ್ ಎಸ್ ಪಿ ಗಿರೀಶ ಸಿಪಿಐ ಸುರೇಶ ಬಂಡೆ ಗುಂಬಳ ಪೋಲಿಸ್ ವಾಹನಗಳನ್ನು ತರಿಸಿ ಘಟನೆ ನಡೆದ ಸ್ಥಳದಲ್ಲಿ ಮತ್ತು ಕಂಠಿ ಸರ್ಕಲ್ ನಲ್ಲಿ ನಿಲ್ಲಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ. ಶಹರ್ ಠಾಣೆಯ ಪಿಎಸ್ ಐ ಕೃಷ್ಣವೇಣಿ ಗುರ್ಲ ಹೊಸುರ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ನಡೆಸಿದ್ದಾರೆ.

Previous articleತವರಿಗೆ ಮರಳಿದ ಪ್ರಾಚೀನ ಸಂಪತ್ತು
Next articleಬರಪೀಡಿತ ಪ್ರದೇಶ ಎಂದು ಘೋಷಿಸಿ