ಸರಣಿ ಅಪಘಾತ: ಕಾರಿನಲ್ಲಿ ದನದ ಮಾಂಸ ಪತ್ತೆ

0
15

ಸಾಗರ : ಬಸ್ಸು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಆನಂದಪುರ ಸಮೀಪದ ಐಗಿನ ಬೈಲು ತಿರುವಿನಲ್ಲಿ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ. ಸಾಗರದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಜೆ ಆರ್ ಬಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಶಿವಮೊಗ್ಗದಿಂದ ಸಿಗಂದೂರಿಗೆ ದೇವಿಯ ದರ್ಶನಕ್ಕೆ ಹೊರಟಿದ್ದ ನ್ಯಾಯಾಧೀಶರ ಕಾರಿಗೆ ಢಿಕ್ಕಿ ಹೊಡೆದು,ನ್ಯಾಯಾಧೀಶರ ಕಾರು ಹಿಂಭಾಗದಲ್ಲಿ ಬರುತ್ತಿದ್ದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ ತಿಳಿದು ಬಂದಿದೆ. ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕಿಡಾದ ಕಾರಿನಲ್ಲಿ ದನದ ಮಾಂಸ ಪತ್ತೆಯಾಗಿದ್ದು ಕಾರು ಚಾಲಕ ಪರಾರಿಯಾಗಿದ್ದಾನೆ. ಆನಂದಪುರ ಠಾಣೆ ಪೊಲೀಸರು ಪರಿಶಿಲನೆ ನಡೆಸಿದ್ದಾರೆ.

Previous articleಕಳಸಾ ಬಂಡೂರಿ ಯೋಜನೆ ಜಾರಿಯಲ್ಲಿ ಜೋಶಿ ರಾಜಕಾರಣ
Next articleಆನಂದ್ ಸಿಂಗ್ ರಾಜೀನಾಮೆ