ಹಂಪಿಯಲ್ಲಿ ಭಾರತ ನೇತೃತ್ವದ #G20 ಸಭೆ

0
19

ಹಂಪಿ: ಐತಿಹಾಸಿಕ ತಾಣಗಳ ರಕ್ಷಣೆ ಹಾಗೂ ಅದರ ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ. ಜಿ 20 ಹಿನ್ನೆಲೆಯಲ್ಲಿ ಇಂದು ಹಂಪಿಯಲ್ಲಿ ನಡೆಯುತ್ತಿರುವ ಈ ಸಭೆ ಮಹತ್ವದ್ದಾಗಿದೆ, ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ, ನಮ್ಮ ನಾಡಿನ ನಮ್ಮ ದೇಶದ ಹೆಮ್ಮೆಯ ಹಂಪಿಯಲ್ಲಿ ಭಾರತದ ನೇತೃತ್ವದ #G20 ಸಭೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಇತಿಹಾಸ ಹಾಗೂ ಜಿ 20 ರಾಷ್ಟ್ರಗಳು ಒಂದು ಸಮೂಹವಾಗಿ ನಂಬಿರುವ ಮೌಲ್ಯಗಳು ಒಂದು ಸುಂದರ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಜಿ 20 ರಾಷ್ಟ್ರಗಳು ಹಾಕಿಕೊಂಡಿರುವ ಮಹತ್ವಾಕಾಂಕ್ಷಿ ಯೋಜನೆಗಳ ಹಿನ್ನೆಲೆಯಲ್ಲಿ ಇಂದು ಹಂಪಿಯಲ್ಲಿ ನಡೆಯುತ್ತಿರುವ ಈ ಸಭೆ ಮಹತ್ವದ್ದಾಗಿದೆ. ಇಂದಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾದ ವಿಷಯ:

  • ಐತಿಹಾಸಿಕ ತಾಣಗಳ ರಕ್ಷಣೆ ಹಾಗೂ ಅದರ ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಬೇಕಿದೆ
  • ನಮ್ಮ ನಾಡಿನ ಸಂಸ್ಕೃತಿಯ ರಕ್ಷಣೆಗಾಗಿ ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು
  • ಸೃಜನಾತ್ಮಕ ಆರ್ಥಿಕತೆಯ ಪ್ರಚಾರ
  • ನಮ್ಮ ನಾಡಿನ ಸಾಂಸ್ಕೃತಿಕ ಆಸ್ತಿಗಳ ರಕ್ಷಣೆ.
    ಇಡೀ ಜಗತ್ತು ಒಂದು ಕುಟುಂಬ ಎಂಬ ಪರಿಕಲ್ಪನೆಯಂತೆ ಭಾರತದ ನೇತೃತ್ವದಲ್ಲಿ #G20 ಸಭೆ ಯಶಸ್ವಿಯಾಗಿ ನೆರವೇರಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
Previous articleಧಾರವಾಡದಲ್ಲಿ ಜೈನ ಸಮುದಾಯದವರ ಮೌನ ಪ್ರತಿಭಟನೆ
Next articleದಾನತ್ರಯಗಳು