ವಿಜಯಪುರ(ಸಿಂದಗಿ): ತಾಲೂಕಿನ ಬಳಗಾನೂರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಮೊಬೈಲ್ ಟವರ್ ಏರಿದ ಘಟನೆ ಶನಿವಾರ ನಡೆದಿದೆ. ತೆಗ್ಗಿಹಳ್ಳಿ ಗ್ರಾಮದ ಸತೀಶ ಕಡಣಿ ಬಳಗಾನೂರ ಗ್ರಾಮದಲ್ಲಿ ಮೊಬೈಲ್ ಟವರ್ ಏರಿ ಆತಂಕ ಸೃಷ್ಟಿಸಿದ್ದಾನೆ. ಸತೀಶ ವಿವಸ್ತ್ರನಾಗಿ ಟವರ್ ಏರಿ ಅಪಾಯಕಾರಿಯಾಗಿ ನಡೆದುಕೊಂಡಿದ್ದಾನೆ. ನಂತರ ಘಟನಾ ಸ್ಥಳಕ್ಕೆ ಆಲಮೇಲ ಪೊಲೀಸ್ ಠಾಣೆ ಸಿಬ್ಬಂದಿ ಆಗಮಿಸಿ ಆತನನ್ನು ಯಶಸ್ವಿಯಾಗಿ ಕೆಳಗೆ ಇಳಿಸಿದ್ದಾರೆ. ಇತನು ಮದ್ಯದ ನಶೆಯಲ್ಲಿ ಈ ರೀತಿ ನಡೆದುಕೊಂಡಿದ್ದಾನೆ ಎನ್ನಲಾಗುತ್ತಿದೆ.