ಮಳೆಗೆ ಕೊಚ್ಚಿಹೋದ ಇಬ್ಬರು ಕಾರ್ಮಿಕರು

0
22
ನೀರು

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಶುಕ್ರವಾರ ಕೊಂಚ ಮಳೆ ಕಡಿಮೆಯಾಗಿದೆ. ಆದರೆ ಕುಮಟಾದ ಗೋಕರ್ಣದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಹಳ್ಳದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.
ಗೋಕರ್ಣದ ಪೋಸ್ಟ್ ಬೆಟ್ಕುಳಿ ಮೂಲದ ಸತೀಶ ನಾಯ್ಕ್(38), ಉಲ್ಲಾಸ ಗಾವಡಿ(50) ಮೃತ ದುರ್ದೈವಿಗಳು. ಅಘನಾಶಿನಿ ನದಿ ಅಂಚಿನ ಹೊಲಕ್ಕೆ ಬೇಲಿ ಹಾಕಲು ಹೋಗಿದ್ದರು. ಆದರೆ ಭಾರಿ ಮಳೆಗೆ ಗದ್ದೆಗಳು ತುಂಬಿ ನೀರು ಹರಿಯುವ ವೇಳೆ ಓರ್ವ ಆಕಸ್ಮಿಕವಾಗಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದು, ಆತನ ರಕ್ಷಣೆಗೆ ಮುಂದಾಗಿದ್ದ ಇನ್ನೋರ್ವ ಕೂಡ ಕೊಚ್ಚಿ ಹೋಗಿದ್ದ ಎನ್ನಲಾಗಿದೆ. ಬಳಿಕ ಗ್ರಾಮಸ್ಥರು ಹುಡುಕಾಟ ನಡೆಸಿ ರಾತ್ರಿ ವೇಳೆ ಮೃತದೇಹಗಳು ಪತ್ತೆಯಾಗಿದೆ.
ಇನ್ನು ಕರಾವಳಿಯಲ್ಲಿ ಮುಂಜಾನೆ ಅಬ್ಬರಿಸಿದ್ದ ಮಳೆ ಬಳಿಕ ಬಿಸಿಲಿನ ವಾತಾವರಣ ಕಂಡುಬಂದಿತ್ತು. ಆದರೆ ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಮಧ್ಯಾಹ್ನದ ಬಳಿಕ ವ್ಯಾಪಕವಾಗಿ ಮಳೆಯಾಗಿದೆ. ಕರಾವಳಿಯಲ್ಲಿ ಶುಕ್ರವಾರವೂ ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿಸಲಾಗಿತ್ತು.

Previous articleಚಿಕ್ಕೋಡಿಯ ಜೈನಮುನಿ ನಾಪತ್ತೆ
Next articleಜೋಗ ಜಲಪಾತಕ್ಕೆ ರಜಾ ದಿನಗಳಲ್ಲಿ ವಿಶೇಷ ಬಸ್ ವ್ಯವಸ್ಥೆ