ಗಾಂಜಾ ಮಾರಾಟ: ಓರ್ವ ಬಂಧನ

0
21
ಕೋಟ್ಯಾಂತರ ಮೌಲ್ಯದ ಗಾಂಜಾ ವಶ
ಗಾಂಜಾ ವಶ

ಕೊಪ್ಪಳ: ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ತಾಲ್ಲೂಕಿನ ಕನಕಾಪುರ ತಾಂಡಾದಲ್ಲಿ ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ತಾಲ್ಲೂಕಿನ ಕನಕಾಪುರ ತಾಂಡಾದ ಸೋಮಶೇಖರ್ ಚವ್ಹಾಣ್ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯಿಂದ 549 ಗ್ರಾಂ. ಗಾಂಜಾ ಹಾಗೂ
530 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ. ಈ ಕುರಿತು
ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಇಂದಿನಿಂದ ಶ್ರೀ ಜಯತೀರ್ಥ ಗುರುಸಾರ್ವಭೌಮರ ಆರಾಧನಾ ಮಹೋತ್ಸವ
Next articleಸ್ಮಾರ್ಟ್ ಸಿಟಿ ಎಡವಟ್ಟು: ಆಕಳು, ಕರು ಬಲಿ…