ರಾಜಕೀಯ ಮಾತನಾಡೋಕೆ ಇಲ್ಲಿಗೆ ಬರಬೇಕಾ

0
30
CM

ಚಿಕ್ಕಮಗಳೂರು: ರಾಜಕೀಯ ಮಾತನಾಡೋಕೆ ಚಿಕ್ಕಮಗಳೂರುಗೆ ಬರಬೇಕಾ ಬೆಂಗಳೂರಿನಲ್ಲೇ ಮಾತನಾಡ್ತೀವಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ, ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೆಸಾರ್ಟ್‌ನಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ, ರಾಜಕೀಯ ಮಾತನಾಡೋಕೆ ಇಲ್ಲಿಗೆ ಬರಬೇಕಾ ಬೆಂಗಳೂರಿನಲ್ಲೇ ಮಾತನಾಡ್ತೀವಿ, ಮಾಜಿ ಸಚಿವ ಆರ್​.ಅಶೋಕ್ ಹುಟ್ಟುಹಬ್ಬಕ್ಕಾಗಿ ಇಲ್ಲಿಗೆ ಬಂದಿದ್ದೇವೆ. ಸಮಯ ಸಿಕ್ತು, ಹಾಗಾಗಿ ಹುಟ್ಟುಹಬ್ಬ ಆಚರಿಸಲು ಬಂದಿದ್ದೇವೆ. ಹುಟ್ಟುಹಬ್ಬ ಆಚರಣೆ ಮಾಡಿ ಈಗ ವಾಪಸ್ ತೆರಳುತ್ತಿದ್ದೇವೆ ಎಂದರು. ಜುಲೈ 3 ರಿಂದ ರಾಜ್ಯ ವಿಧಾನಸಭಾ ಅಧಿವೇಶನ ಪ್ರಾರಂಭವಾಗಲಿದ್ದು ಇದಕ್ಕೂ ಮುನ್ನ ವಿಪಕ್ಷ ನಾಯಕರ ಆಯ್ಕೆಯಾಗಬೇಕಿದೆ. ವಿರೋಧ ಪಕ್ಷದ ನಾಯಕ ಯಾರು ಎಂದು ನಾಳೆ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಬಿಜೆಪಿ ನೋಟೀಸ್ ಕ್ಯಾರೇ ಅನ್ನದ ನಾಯಕರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲವನ್ನೂ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. 200 ಯೂನಿಟ್ ಅಂದ್ರು, ವರ್ಷದ ಸರಾಸರಿ ಅಂದರು ನೋಡೋಣ. ಬಹಳ ಗೊಂದಲ ಮಾಡಿ, ಪವರ್ ರೇಟ್ ಕೂಡ ಹೆಚ್ಚು ಮಾಡಿದ್ದಾರೆ ಜನರಿಗೆ ಎಲೆಕ್ಟ್ರಿಕ್ ಶಾಕ್ ಕೂಡ ನೀಡಿದ್ದಾರೆ, ನೋಡೋಣ ಮುಂದೆ ಏನ್ಮಾಡ್ತಾರೆ ಎಂದು ಹೇಳಿದರು.

Previous articleನಿಮ್ಮ ಅಭಿಪ್ರಾಯ ಅನಿಸಿಕೆ ತಿಳಿಸಲು ಇನ್ನು 15 ದಿನ ಅವಕಾಶ
Next articleಲೋಕಸಭೆ ಭವಿಷ್ಯ ನುಡಿದರೆ ಮಠ ಮುಟ್ಟೋದಿಲ್ಲ : ಕೋಡಿ ಶ್ರೀ