ಬೆಂಗಳೂರು: ರಾಷ್ಟ್ರೀಯ ಯುವ ಕಾಂಗ್ರೆಸ್ ಮುಂದಿನ ತಿಂಗಳು ಆಯೋಜಿಸಿರುವ ಯುವ ಸಮಾವೇಶ ಉದ್ಘಾಟನೆಗೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ.
ದೇಶದ ಯುವ ಶಕ್ತಿಯನ್ನು ಸೂಕ್ತ ದಿಕ್ಕಿನತ್ತ ಕೊಂಡೊಯ್ಯುವ ಉದ್ದೇಶದೊಂದಿಗೆ ಮುಂದಿನ ತಿಂಗಳು ರಾಷ್ಟ್ರೀಯ ಯುವ ಕಾಂಗ್ರೆಸ್ ಆಯೋಜಿಸಿರುವ “ಬೆಹತರ್ ಭಾರತ್ ಬುನಿಯಾದಿ” ಸಮಾವೇಶವನ್ನು ಉದ್ಘಾಟಿಸುವಂತೆ ಎಐಸಿಸಿ ಜಂಟಿ ಕಾರ್ಯದರ್ಶಿ ಯುವ ಕಾಂಗ್ರೆಸಿನ ಉಸ್ತುವಾರಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ಯುವ ನಾಯಕರು ಇಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆಹ್ವಾನಿಸಿದರು.