ಹುಬ್ಬಳ್ಳಿ: ಧಾರವಾಡದಿಂದ ಬೆಂಗಳೂರಿಗೆ ನೂತನವಾಗಿ ಆರಂಭವಾದ “ವಂದೇ” ರೈಲಿಗೆ ಬೆಳಗಾವಿಯಿಂದ ಬರುವ ಪ್ರಯಾಣಿಕರಿಗೆ ವೇಳಾ ಹೊಂದಾಣಿಕೆ ಆಗುವಂತೆ, ವಾಯವ್ಯ ಕನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ-ಗ್ರಾಮಾಂತರ ಭಾರತ ವಿಭಾಗದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಬೆಳಗಾವಿಗೆ `ವೋಲ್ವೋ ಮಲ್ಟಿಎಕ್ಸೆಲ್’ ಸಾರಿಗೆ ಸೇವೆಯನ್ನು ಜೂನ್ 28 ರಿಂದ ಪ್ರಾರಂಭಿಸಲಾಗಿದೆ.
ಈ ವಾಹನವು ಬೆಳಗಾವಿಯಿಂದ 11:15 ಕ್ಕೆ ನಿರ್ಗಮಿಸಿ, ವಂದೇ ಭಾರತ ರೈಲು ಬೆಂಗಳೂರಿಗೆ ನಿರ್ಗಮಿಸಲು (ನಿರ್ಗಮನ ವೇಳೆ 1:40 ಗಂಟೆ) ಬರುವ ವೇಳೆಗೆ 1:15 ಗಂಟೆಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ತಲುಪುತ್ತದೆ. ಹಾಗೂ ಬೆಂಗಳೂರಿನಿಆದ ರೈಲಿಗೆ ಹುಬ್ಬಳ್ಳಿಗೆ ಬಂದು ಬೆಳಗಾವಿಗೆ ಹೋಗುವ
ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲು ಬರುವ (ಮಧ್ಯಾಹ್ನ 12:10) ವೇಳೆಗೆ ಹುಬ್ಬಳ್ಳಿ ನಿಲ್ದಾಣದಿಂದ 12:20ಕ್ಕೆ ನಿರ್ಗಮಿಸಿ, ಬೆಳಗಾವಿಗೆ 2:20ಕ್ಕೆ ತಲುಪುತ್ತದೆ. ಸಾರ್ವಜನಿಕ ಪ್ರಯಾಣಿಕರು ಇದರ ಪ್ರಯೋಜನ ಪಡೆಯಲು ಸಂಸ್ಥೆಯ ಬಸ್ಸುಗಳಲ್ಲಿಯೇ ಪ್ರಯಾಣಿಸುವಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಕಟಣೆ.