ಬೂತ್‌ ಗೆದ್ದರೆ ಕ್ಷೇತ್ರ ಗೆದ್ದಂತೆ, ಕ್ಷೇತ್ರ ಗೆದ್ದರೆ ದೇಶ ಗೆದ್ದಂತೆ…

0
14

ಬೆಂಗಳೂರು: “ನನ್ನ ಬೂತ್‌ ಎಲ್ಲಕ್ಕಿಂತಲೂ ಬಲಿಷ್ಠ” ಎಂಬ ಧ್ಯೇಯದೊಂದಿಗೆ ಭಾರತೀಯ ಜನತಾ ಪಾರ್ಟಿಯ ಲಕ್ಷಾಂತರ ಕಾರ್ಯಕರ್ತರ ಜೋತೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂವಾದ ನಡೆಸಿದರು. ಕೇಂದ್ರದ ಬಿಜೆಪಿ ಸರ್ಕಾರಕ್ಕೆ 9 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪಕ್ಷವು ನಡೆಸುತ್ತಿರುವ ಜನಸಂಪರ್ಕ ಅಭಿಯಾನದ ಅಂಗವಾಗಿ ಮೇರಾ ಬೂತ್, ಸಬ್ಸೆ ಮಜಬೂತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ 1918 ಸಂಘಟನಾ ಮಂಡಳಿಗಳು ಮತ್ತು ಬೂತ್‌ಗಳಲ್ಲಿ ಹಾಜರಿರುವ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ನೀವು ಕೇವಲ ಬಿಜೆಪಿ ಕಾರ್ಯಕರ್ತರಲ್ಲ ದೇಶದ ಸಂಕಲ್ಪ ಸಿದ್ಧಿಗೆ ಹಗಲಿರುಳು ಶ್ರಮಿಸುವ ಸಿಪಾಯಿಗಳು ಪ್ರತಿ ಬಾರಿಯೂ ಮುಖ್ಯಮಂತ್ರಿಗಳು, ಸಚಿವರು, ಪಕ್ಷದ ಅಧ್ಯಕ್ಷರು, ಪ್ರದೇಶ ಕಾರ್ಯಸಮಿತಿ, ಜಿಲ್ಲಾ ಸಮಿತಿ, ಮಂಡಲ ಕಾರ್ಯಸಮಿತಿ ಸದಸ್ಯರೊಂದಿಗೆ ಸಭೆಗಳು ನಡೆಯುವುದು ಸಾಮಾನ್ಯ ಆದರೆ ಈ ಬಾರಿ ಬೇರು ಅಂದರೆ ಬೂತ್ ಮಟ್ಟದಿಂದಲೇ ಸಭೆಯನ್ನು ಆಯೋಜಿಸಲಾಗಿದೆ, ಬಿಜೆಪಿ ಕಾರ್ಯಕರ್ತರು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ರಾಜನೀತಿ ನಡೆಸುವವರಲ್ಲ, ದೇಶದ ಹಳ್ಳಿ, ಗುಡ್ಡ ಗಾಡುಗಳಲ್ಲಿ ಯಾವುದೇ ಪ್ರತಿಕೂಲ ಪರಿಸ್ಥಿಯಲ್ಲೂ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುವ ಕೆಲಸ ಮಾಡುವವರು ಬಿಜೆಪಿಯವರು, ಹೀಗಾದಲ್ಲಿ ಮಾತ್ರ ಪಕ್ಷವನ್ನು ಬಲಿಷ್ಟವಾಗಿ ಕಟ್ಟಲು ಸಾಧ್ಯ ಎಂದರು.

Previous articleವಿಜಯಪುರ: ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣ
Next articleಎಲ್ಲದಕ್ಕೂ ಗೋವು ಆಧಾರ