ಒಳ್ಳೆಯ ದಿನಗಳು ಅಸಾಧ್ಯ!

0
18

ನವದೆಹಲಿ: ಒಳ್ಳೆಯ ದಿನಗಳು ಅಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

RBI ವರದಿಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಅವರು “ಕಾಂಗ್ರೆಸ್ ಪಕ್ಷವು ಹಣದುಬ್ಬರವಿದೆ ಎಂದು ಹೇಳಿದಾಗ… ಮೋದಿ ಹೇಳುತ್ತಾರೆ ಹಣದುಬ್ಬರವು ಗೋಚರಿಸುವುದಿಲ್ಲ”

ಹಣದುಬ್ಬರವಿದೆ ಎಂದು ಸಾರ್ವಜನಿಕರು ಹೇಳಿದಾಗ… ಮೋದಿ ಸರ್ಕಾರ ಪೂರೈಕೆ, ಹವಾಮಾನ, ಯುದ್ಧಕ್ಕೆ ಮನ್ನಣೆ ನೀಡುತ್ತದೆ!

ಈಗ ಖುದ್ದು ಭಾರತ ಸರ್ಕಾರದ ಆರ್‌ಬಿಐ ಹೇಳುತ್ತಿದೆ, ಹಣದುಬ್ಬರದಿಂದ ಸಾರ್ವಜನಿಕರು ಕಡಿಮೆ ಖರ್ಚು ಮಾಡುತ್ತಿದ್ದಾರೆ. ಇದರಿಂದಾಗಿ ಮಾರಾಟ ಕಡಿಮೆಯಾಗಿದೆ ಮತ್ತು ಖಾಸಗಿ ಹೂಡಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಈ ವಿಷವರ್ತುಲ ನಮ್ಮ ಆರ್ಥಿಕತೆಗೆ ಮಾರಕವಾಗಿದೆ ಎಂದಿದೆ.

ಈಗ ಪ್ರಧಾನಿ ನರೇಂದ್ರ ಮೋದಿ RBI ವರದಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಹೇಳಿ? ಎಂದು ಖರ್ಗೆ ಮೋದಿಯವರನ್ನು ಕುಟುಕಿದ್ದಾರೆ.

Previous articleಕರಡಿ ದಾಳಿ: ಇಬ್ಬರು ರೈತರಿಗೆ ಗಂಭೀರ ಗಾಯ
Next articleಸೇವಾ ಸಿಂಧು ಹೆಸರಲ್ಲಿ ನಕಲಿ ಆ್ಯಪ್‌: ಎಚ್ಚರಿಕೆ..!