ಮಹಿಳೆಯ ಜತೆ ಕಿರಿಕ್‌ ಕಂಡೆಕ್ಟರ್‌ಗೆ ಗೂಸಾ

0
20

ಚಿತ್ರದುರ್ಗ: ಮಹಿಳೆಯ ಜತೆ ಕಿರಿಕ್‌ ಮಾಡಿದ್ದ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕನನ್ನು ಹಿಗ್ಗಾಮುಗ್ಗಾ ಏಳೆದಾಡಿ ಥಳಿಸಿದ ಘಟನೆ ಚಳ್ಳಕೆರೆ ಪಟ್ಟಣದ ನೆಹರು ವೃತ್ತದಲ್ಲಿ ಇಂದು ನಡೆದಿದೆ.

ದಾಬಸಪೇಟೆ ಬಳಿ ಸಾರಿಗೆ ಬಸ್ ನಿಲ್ಲಿಸದ ಹಾಗೂ ಮಹಿಳೆ ಜೊತೆಯೇ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ನಿರ್ವಾಹಕನ ಮೇಲೆ‌ ಹಲ್ಲೆ ನಡೆಸಿರುವ ಘಟನೆ ಚಳ್ಳಕೆರೆ ಪಟ್ಟಣದ ನೆಹರು ವೃತ್ತದಲ್ಲಿ ಇಂದು ಬೆಳಗ್ಗೆ ನಡೆದಿದೆ.

ರಾಯದುರ್ಗ-ಬೆಂಗಳೂರು ಸಾರಿಗೆ ಬಸ್ ನಿರ್ವಾಹಕ ಚಂದ್ರೇಗೌಡ ಹಲ್ಲೆಗೊಳಗಾದ ವ್ಯಕ್ತಿ. ನಿನ್ನೆ ದಿನ ಚಳ್ಳಕೆರೆ ಪಟ್ಟಣದಿಂದ ದಾಬಸ್ ಪೇಟೆಗೆ ತೆರಳುವ ಮಹಿಳೆ ರಾಯದುರ್ಗ – ಬೆಂಗಳೂರು ಮಾರ್ಗದ ಸಾರಿಗೆ ಬಸ್ಸನ್ನು ಏರಿದ್ದಾರೆ. ನಂತರ ದಾಬಸಪೇಟೆ ಹತ್ತಿರ ಬರುತ್ತಿದ್ದಂತೆಯೇ ಮಹಿಳೆ ಬಸ್ ನಿಲ್ಲಿಸಲು ನಿರ್ವಾಹಕ ಚಂದ್ರೇಗೌಡ ಅವರಿಗೆ ತಿಳಿಸಿದ್ದಾರೆ. ಆದರೆ ನಿರ್ವಾಹಕ ನಕಾರ ಮಾಡಿದ್ದು, ಬೆಂಗಳೂರು ಮೆಜೆಸ್ಟಿಕ್ ಹತ್ತಿರ ಬಸ್ ನಿಲ್ಲಿಸಿದ್ದಾರೆ. ಇದರಿಂದ ಮಹಿಳೆ ಆಕ್ರೋಶಗೊಂಡು ಪ್ರಶ್ನೆ ಮಾಡಿದ್ದಾರೆ. ಆಗ ನಿರ್ವಾಹಕ ಚಂದ್ರೇಗೌಡ ಮಹಿಳೆ ಬಗ್ಗೆ ಏರುಧ್ವನಿಯಲ್ಲಿ ಕೂಗಾಡಿ, ಮಹಿಳೆ ಜತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ.

ಈ ವಿಷಯವನ್ನು ಮಹಿಳೆ ಚಳ್ಳಕೆರೆಯಲ್ಲಿರುವ ತಮ್ಮ ಸಂಬಂಧಿಕರಿಗೆ ತಿಳಿಸಿದ್ದಾರೆ. ಪ್ರತಿ ದಿನದಂತೆ ಸಾರಿಗೆ ಬಸ್ ಇಂದು ಬೆಳಗ್ಗೆ ಚಳ್ಳಕೆರೆ ಪಟ್ಟಣಕ್ಕೆ ಆಗಮಿಸಿದಾಗ ಕಾದು ಕುಳಿತಿದ್ದ ಮಹಿಳೆ ಸಂಬಂಧಿಕರು ನೆಹರು ವೃತ್ತದ ಬಳಿ‌ ಬಸ್ಸನ್ನು ಅಡ್ಡಗಟ್ಟಿ ನಿರ್ವಾಹಕ ಚಂದ್ರೇಗೌಡ ಅವರನ್ನು ಹಿಗ್ಗಾಮುಗ್ಗಾ ಏಳೆದಾಡಿ ಥಳಿಸಿದ್ದಾರೆ. ನಂತರ ಸಾರಿಗೆ ಸಂಸ್ಥೆಯ ಇತರೆ ಬಸ್ಸಿನ ನಿರ್ವಾಹಕ ಹಾಗೂ ಚಾಲಕರು ಆಗಮಿಸಿ ಮತ್ತೊಮ್ಮೆ ಈ ರೀತಿ ಆಗದಂತೆ ಎಚ್ಚರ ವಹಿಸಿಲಾಗುವುದು ಎಂದು ಹೇಳಿ ಹಲ್ಲೆಗೊಳಗಾದ ನಿರ್ವಾಹಕ ಚಂದ್ರೇಗೌಡರನ್ನು ಕರೆದೊಯ್ದು ಚಳ್ಳಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವಿದ್ಯುತ್ ದರ ಹೆಚ್ಚಳಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ
Next articleಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರ ಸನ್ನದು ಶಾಶ್ವತ ರದ್ದು