ಹ್ಯಾಕ್ ಮಾಡಿ ಸರ್ವರ್ ಡೌನ್ ಮಾಡಿದ್ದಾರೆ

0
19
ಸತೀಶ ಜಾರಕಿಹೊಳಿ

ಬೆಳಗಾವಿ: ‘ಇವಿಎಂ ಮಾದರಿಯಲ್ಲಿ ಕೇಂದ್ರ ಸರ್ಕಾರ ಹ್ಯಾಕ್ ಮಾಡಿ ಸರ್ವರ್ ಡೌನ್ ಆಗುವಂತೆ ಮಾಡಿದೆ ಎಂದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ‘ಸರಿಯಾದ ಯೋಜನೆ ರೂಪಿಸದೆ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತಿದ್ದಾರೆ’ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಕ್ಕೆ ಪ್ರತಿಕ್ರಿಯಿಸಿ ಸತೀಶ್ ಜಾರಿಕಿಹೊಳಿ ಮಾತನಾಡುತ್ತಾ, ನಮ್ಮ ​​​​ಸರ್ಕಾರದ ಸರ್ವರ್​ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ನಮ್ಮ ಸಿಸ್ಟಮ್​ಗಳನ್ನು ಇವಿಎಂ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಎಷ್ಟೇ ಹ್ಯಾಕ್​ ಮಾಡಿದರೂ ನಮ್ಮ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಆನ್​ಲೈನ್​ನಲ್ಲಿ ಸಮಸ್ಯೆಯಾದರೆ ಆಫ್​ಲೈನ್​ನಲ್ಲಿ ಅರ್ಜಿ ಪಡೆಯುತ್ತೇವೆ. ಒಂದು ತಿಂಗಳು ತಡ ಆಗಬಹುದು ಅದಕ್ಕಿಂತಲೂ ಹೆಚ್ಚು ಆಗಲ್ಲ ಎಂದರು.

Previous articleವಿಧಾನಪರಿಷತ್ ಚುನಾವಣೆ: ಜಗದೀಶ್‌ ಶೆಟ್ಟರ್‌ ನಾಮಪತ್ರ ಸಲ್ಲಿಕೆ
Next articleಇದು ಸುಳ್ಳ ಮಳ್ಳರ ಸರ್ಕಾರ